ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದ ಜಾರ್ಖಂಡ್ನ ಮಾಜಿ ಸಚಿವ ಅನೋಶ್ ಎಕ್ಕಾ ಅವರಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ, 2 ಕೋಟಿ ದಂಡ ವಿಧಿಸಿ ರಾಂಚಿ ನ್ಯಾಯಾಲಯ ತೀರ್ಪು ನೀಡಿದೆ.
ಪಿಎಂಎಲ್ಎ ವಿಶೇಷ ನ್ಯಾಯಾಧೀಶ ಅನಿಲ್ ಕುಮಾರ್ ಮಿಶ್ರಾ ಅವರು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದಾರೆ. ಹಣ ವರ್ಗಾವಣೆ ಪ್ರಕರಣದಲ್ಲಿ ಅನೋಶ್ ಎಕ್ಕಾ ದೋಷಿ ಎಂದು ಮಾರ್ಚ್ 21 ರಂದು ಜಾರ್ಖಂಡ್ ಕೋರ್ಟ್ ಹೇಳಿತ್ತು.
ಮಾಜಿ ಮುಖ್ಯಮಂತ್ರಿ ಮಧು ಕೋಡಾ ಹಾಗೂ ಎಕ್ಕಾ ಸಹ ಆರೋಪಿಯಾಗಿದ್ದರು. ಕೋಡಾ ಸಂಪುಟದಲ್ಲಿ ಎಕ್ಕಾ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತು.



