- ಜಿ.ಎನ್. ಶಿವಕುಮಾರ
ಶಿಕ್ಷಣ ಎಂಬುದು ಮಕ್ಕಳಿಗೆ ಬೌಧಿಕ ಮತ್ತು ದೈಕವಾಗಿಯೂ ಹೊರೆ ಎನಿಸಿಬಿಟ್ಟಿದೆ. LKGಯಿಂದ ಪ್ರೌಢ ಶಾಲೆವರೆಗೆ 12 ವರ್ಷ ಭಾರದ ಸ್ಕೂಲ್ ಬ್ಯಾಗ್ ಹೊತ್ತು ಹೊತ್ತು ಹಲವು ಮಕ್ಕಳಿಗೆ ಗೂನು ಬೆನ್ನಾಗಿದೆ. ಯೋಗ (yoga) ದಲ್ಲಿ ಹೇಳಿರುವ ಬುಜಂಗಾಸನ(Bhujangasana) ಅಭ್ಯಾಸದಿಂದ ಇದನ್ನು ಸರಿಪಡಿಸಬಹುದು.
ಮಕ್ಕಳು ನೆಲವನ್ನೇ ನೋಡುತ್ತಾ ಬಾಗಿ ನಡೆಯುವಂತಾಗಿದೆ. ಕುತ್ತಿಗೆ, ಭುಜವನ್ನು ನೇರವಾಗಿಸಿ ಎದೆಯುಬ್ಬಿಸಿ ನಡೆದಾಡುವ, ಧೀರ ನಡಿಗೆ ರೂಢಿಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ.ಎಳೆಯ ವಯಸ್ಸಿಗೆ ಭಾರ ಹೊತ್ತು ಭಾಗಿ ನಡೆದದ್ದರ ಪರಿಣಾಮ ಇಂದು. ಮಕ್ಕಳಲ್ಲಿ ಗೂನು ಬೆನ್ನೂ ಹೆಚ್ಚುತ್ತಿವೆ. ಈಗಲೂ ಚಿಂತೆಪಡಬೇಡಬೇಕಾಗಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಈಗಲೂ ಯೋಗಾಸನಗಳ ಅಭ್ಯಾಸ, ವ್ಯಾಯಾಮದಿಂದ ಸರಿಪಡಿಸಬಹುದು.
ಯಾವೆಲ್ಲಾ ಆಸನದಿಂದ ಬೆನ್ನಿನ ಡುಬ್ಬ(ಗೂನು) ನೆಟ್ಟಗಾಗುತ್ತೆ? ಎಂದು ನೋಡುವುದಾದರೆ; ಧನುರಾಸನ, ಭುಜಂಗಾಸನ, ಶಲಭಾಸನ, ಚಕ್ರಾಸನ, ಅರ್ಧಮತ್ಸ್ಯೇಂದ್ರಾಸನಗಳು ಉಪಯುಕ್ತವಾದವು. ಹುತ್ತ ಹಾವಿನ ವಾಸ ಸ್ಥಾನ ನಿಜ. ಹಾವು ಕಟ್ಟಿಕೊಂಡ ಮನೆ ಅಲ್ಲ. ಆದರೆ, ಇದು ಗೆದ್ದಲು ಕಟ್ಟಿದ ಟೊಳ್ಳು ದಿಬ್ಬ. ಹಾವು ನಿರ್ಮಿಸಿದ್ದಲ್ಲ. ತಂಪು ವಾತಾವರಣ ಇರುವುದರಿಂದ ಹಾವು ಅಲ್ಲಿ ವಾಸಿಸುತ್ತದೆ. ಹಾವಿಗೆ ಭುಜಂಗ ಎಂದೂ ಕರೆಯುತ್ತಾರೆ. ಇದನ್ನು ಹೋಲುವ ಭುಜಂಗಾಸನವೂ(Bhujangasana) ಇದೆ.
ಅಭ್ಯಾಸ ಕ್ರಮ
- ನೆಲ ಹಾಸಿನ ಮೇಲೆ ಹೊಟ್ಟೆಯನ್ನು ಕೆಳಗೆ ಮಾಡಿ ಕಾಲುಗಳನ್ನು ನೀಳವಾಗಿ ಚಾಚಿ ಮಲಗಿ. ಗದ್ದವನ್ನು ನೆಲಕ್ಕೂರಿ ಮುಂದೆ ನೋಡುತ್ತಿರಿ. ಅಂಗೈಗಳನ್ನು ಎದೆಯ ಪಕ್ಕಕ್ಕೆ ಇರಿಸಿ, ಪಾದಗಳನ್ನು ಚೂಪಾಗಿಸಿ.
- ಉಸಿರನ್ನು ತೆಗೆದುಕೊಳ್ಳುತ್ತಾ ಕೈಗಳ ಮೇಲೆ ಭಾರ ಹಾಕಿ, ಸೊಂಟದಿಂದ ಮೇಲಿನಭಾಗವನ್ನು ಹೆಡೆ ಎತ್ತಿದ ಸರ್ಪದಂತೆ ಮೇಲೆತ್ತಿ. ದೃಷ್ಟಿ ಮುಂದೆ ನೋಡುತ್ತಿರಲಿ. ತೊಡೆ, ಕಾಲುಗಳು ನೆಲದಿಂದ ಮೇಲೇಳದಂತೆ ನೋಡಿಕೊಳ್ಳಿ. ಬಳಿಕ ಸರಳವಾದ ಉಸಿರಾಟ ನಡೆಸುತ್ತಾ ನಿಮಿಷ ಕಾಲ ಅಂತಿಮ ಸ್ಥಿತಿಯಲ್ಲಿ ನೆಲೆಸಿ. ನಿಧಾನವಾಗಿ ಅವರೋಹಣ ಮಾಡಿ.
- ಮುಂದಿನ ಹಂತವಾಗಿ ಸರಳ ಹಸ್ತ ಭುಜಂಗಾನ ಇದ್ದು, ಇಲ್ಲಿ ಎದೆಯನ್ನು ಸಾಧ್ಯವಾದಷ್ಟು ಹಿಗ್ಗಿಸುತ್ತಾ ಕುತ್ತಿಗೆಯನ್ನು ಹಿಂದಕ್ಕೆ ಭಾಗಿಸಿ. ಆಕಾಶದತ್ತ ದೃಷ್ಟಿಹರಿಸಿ.

ಪ್ರಯೋಜನಗಳು:
ಎದೆಯು ವಿಶಾಲವಾಗುವುದು. ಗೂನು ಬೆನ್ನು ನಿವಾರಣೆಗೆ ಸಹಕಾರಿಯಾದುದು. ತೋಳುಗಳು, ಕುತ್ತಿಗೆ, ಸೊಂಟಕ್ಕೆ ಶಕ್ತಿ ಲಭ್ಯವಾಗುತ್ತದೆ. ಬೆನ್ನು, ಸೊಂಟ ನೋವು ನಿವಾರಣೆಯಾಗುತ್ತದೆ.
ಸೂಚನೆ: ತೀವ್ರ ಬೆನ್ನು ನೋವು ಇರುವಾಗ ಹಾಗೂ ಬೆನ್ನಿನ ಮತ್ತು ಸೊಂಟದ ಶಸ್ತ್ರ ಚಿಕಿತ್ಸೆ ಆದಾಗ ಅಭ್ಯಾಸಿಸಕೂಡದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Shivakumara G.N. M.A, B.Ed, YIC
YOGA Instructor, International Yoga Champion
Contact/wp: 94802 25879 Email: shivugn80@gmail.com




