ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ ಕಳೆದ 15 ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಇಂದು ಮತ್ತೆ ಮಳೆಯಾಗಿದೆ. ದಾವಣಗೆರೆಯ ಹೈಸ್ಕೂಲ್ ಮೈದಾನ, ಲಾಯರ್ ರೋಡ್, ಕೆಟಿಜಿ ನಗರ, ಪಿಬಿ ರಸ್ತೆ, ವಿನೋಬ ನಗರ, ಹಳೆಯ ದಾವಣಗೆರೆ ಸೇರಿದಂತೆ ಕೆಲವು ಭಾಗದಲ್ಲಿ ಮಳೆಯಾಗಿದೆ.
ಭಾರೀ ಬಿಸಿಲಿನಿಂದ ಬಳಲುತ್ತಿದ್ದ ದಾವಣಗೆರೆಯಲ್ಲಿ ಮಳೆಯ ಸಿಂಚನದಿಂದ ವಾತಾವರಣ ತಂಪಾದಂತಾಗಿದೆ. ಇನ್ನು ದಾವಣಗೆರೆ ಸುತ್ತಮುತ್ತ ರೈತರು ಮಳೆಗಾಗಿ ಕಾಯುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯಲ್ಲಿದ್ದಾರೆ. ೧೫ ದಿನದ ನಂತರ ಮತ್ತೆ ಮಳೆ ರೀಎಂಟ್ರಿ ಕೊಟ್ಟಿರುವುದರಿಂದ ರೈತರ ಮುಗದಲ್ಲಿ ಹೊಸ ಭರವಸೆ ಮೂಡಿದಂತಾಗಿದೆ.



