ಡಿವಿಜಿ ಸುದ್ದಿ, ದಾವಣಗೆರೆ: ಮಾಜಿ ಸಚಿವ, ಶಾಸಕ ಎಸ್. ಎ. ರವೀಂದ್ರನಾಥ್ ಅವರು ಲಾಕ್ ಡೌನ್ ನಿಂದ ತೊಂದರೆ ಅನುಭವಿಸುತ್ತಿರುವ ಸುಮಾರು 5 ಸಾವಿರ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿದ್ದಾರೆ.
ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಬಡವರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೇರೆ ರಾಜ್ಯ, ಜಿಲ್ಲೆಯಿಂದ ಬಂದ ವಲಸಿಗರಿಗೆ ಕಿಟ್ ವಿರಿಸಲಾಯಿತು. ನಗರ ಸೋಮೇಶ್ವರ ವಿದ್ಯಾಲಯದಲ್ಲಿ ಪ್ರತಿ ದಿನ ಕಿಟ್ ಗಳನ್ನು ಪ್ಯಾಕಿಂಗ್ ಕಾರ್ಯ ನಡೆಯುತ್ತಿದೆ.

ಬಿಜೆಪಿ ಮುಖಂಡ ಕೆ.ಎಂ ಸುರೇಶ್, ಮಹಾನಗರಪಾಲಿಕೆ ಸದಸ್ಯರ ವಿರೇಶ್, ಮುಖಂಡರಾದ ಪ್ರಸನ್ನ ಯು, ಜೊಳ್ಳೆ ಗುರು ಸೇರಿದಂತೆ ಮತ್ತಿತರರು ಸಾಥ್ ನೀಡುತ್ತಿದ್ದಾರೆ.



