ಡಿವಿಜಿ ಸುದ್ದಿ, ಬೆಂಗಳೂರು: ನಿನ್ನೆ ಸಂಜೆ (ಏಪ್ರಿಲ್ 16) 5ರಿಂದ ಇಂದು ಮಧ್ಯಾಹ್ನ 12 ಗಂಟೆ ವರಗೆ ರಾಜ್ಯದಲ್ಲಿ ಕೊರೊನಾ ಸೋಂಕಿತ 38 ಹೊಸ ಪ್ರಕರಣಗಳು ದಾಖಲಾದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಈವರೆಗೂ ಒಟ್ಟು 13 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 82 ಮಂದಿ ಗುಣಮುಖರಾಗಿದ್ದಾರೆ.
ಇಂದು ದಾಖಲಾದ ಹೊಸ ಪ್ರಕರಣಗಳಲ್ಲಿ ಬೆಂಗಳೂರಿನ 9 ಮಂದಿ, ನಂಜನಗೂಡಿನ 11 ಮಂದಿ, ಮೈಸೂರಿನ ಒಬ್ಬರು, ಮಳವಳ್ಳಿಯ ಮೂವರು, ಚಿಕ್ಕಬಳ್ಳಾಪುರದ 3 ಜನ, ದಕ್ಷಿಣ ಕನ್ನಡದ ಒಬ್ಬ ವ್ಯಕ್ತಿ, ಬಳ್ಳಾರಿ ಹೊಸಪೇಟೆಯ ಏಳು ಮಂದಿ, ವಿಜಯಪುರದ ಇಬ್ಬರು ಹಾಗೂ ಬೀದರ್‌ನ ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ.



