ನವದೆಹಲಿ: ಕೊರೊನಾ ವೈರಸ್ ತಡೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಎರಡನೇ ಹಂತದ ಲಾಕ್‌ಡೌನ್‌ಗೆ ಕೆಲವು ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಅಪ್ಪಿತಪ್ಪಿ ಈ ಮಾರ್ಗಸೂಚಿ ಉಲ್ಲಂಘಿಸಿದವರಿಗೆ ದಂಡ, ಜೈಲು ಶಿಕ್ಷೆ ಗ್ಯಾರಂಟಿ
ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಾ ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನು ಲಾಕ್‌ಡೌನ್ ಇರುವಾಗ ನಿಯಮ ಸರಿಯಾಗಿ ಪಾಲಿಸದಿರುವುದರಿಂದ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ.
ನಿಯಮ ಉಲ್ಲಂಘಿಸಿದರವರಿಗೆ ಸರ್ಕಾರ ಕಠೋರ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ಮಾರ್ಗಸೂಚಿಯಲ್ಲಿ ಯಾವ ತಪ್ಪಿಗೆ ಎಷ್ಟು ಶಿಕ್ಷೆ ಎಂಬ ಉಲ್ಲೇಖವಿದೆ.
ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳು
- ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯಕ್ಕೆ ತೊಂದರೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ, ಇಲ್ಲವೇ ಎರಡೂ ಶಿಕ್ಷೆ
- ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿರ್ದೇಶನ ಪಾಲಿಸಲು ನಿರಾಕರಿಸುವ ವ್ಯಕ್ತಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತುಅಥವಾ ದಂಡ
- ನಿರ್ದೇಶನ ಪಾಲಿಸದೆ ಯಾವುದೇ ಜೀವ ಹಾನಿಗೆ ಕಾರಣವಾದರೆ ಎರಡು ವರ್ಷಗಳವರೆಗೆ ಕಠಿಣ ಜೈಲುವಾಸ
- ಸರ್ಕಾರದಿಂದ ಯಾವುದೇ ನೆರವು, ಪರಿಹಾರ, ಮರು ನಿರ್ಮಾಣ, ದುರಸ್ತಿ ಮತ್ತಿತರ ಯಾವುದೇ ಲಾಭಗಳನ್ನು ಪಡೆಯವುದಕ್ಕೋಸ್ಕರ, ಗೊತ್ತಿದ್ದೂ ಸುಳ್ಳು ಹೇಳುವ ವ್ಯಕ್ತಿಗೆ ಎರಡು ವರ್ಷದವರೆಗೆ ಜೈಲು ಶಿಕ್ಷೆ , ದಂಡ
- ಹಣ, ಪರಿಹಾರ ಸಾಮಗ್ರಿ ವಿತರಣೆಗಾಗಿ ಜವಾಬ್ದಾರಿ ವಹಿಸಲಾದ ವ್ಯಕ್ತಿಯು ಅವುಗಳನ್ನು ದುರ್ಬಳಕೆ ಮಾಡಿಕೊಂಡಲ್ಲಿ ಅಥವಾ ಸ್ವಜನಪಕ್ಷಪಾತ ತೋರಿಸಿದಲ್ಲಿ ಎರಡು ವರ್ಷಗಳವರೆಗೆ ಶಿಕ್ಷೆ, ದಂಡ.
- ವಿಕೋಪದ ಬಗ್ಗೆ, ಅದರ ಪರಿಮಾಣ ಮತ್ತು ಪ್ರಮಾಣದ ಬಗ್ಗೆ ಸುಳ್ಳು ಎಚ್ಚರಿಕೆಯ ಸಂದೇಶಗಳನ್ನು ರವಾನಿಸಿ, ಆತಂಕ ಹಬ್ಬುವುದಕ್ಕೆ ಕಾರಣವಾದಲ್ಲಿ ಅಥವಾ ಅಪಾಯಕ್ಕೆ ಕಾರಣವಾದಲ್ಲಿ ಒಂದು ವರ್ಷದವರೆಗೆ ಜೈಲು, ದಂಡ
- ಸರ್ಕಾರಿ ಇಲಾಖೆಯಲ್ಲಿ ಇಂಥ ತಪ್ಪುಗಳು ನಡೆದಲ್ಲಿ, ಅವರ ಗಮನಕ್ಕೆ ಬಾರದೇ ನಡೆದಿದೆ ಎಂದು ಸಾಬೀತು ಆಗದಿದ್ದಲ್ಲಿ, ಆಯಾ ಇಲಾಖಾ ಮುಖ್ಯಸ್ಥರೇ ಹೊಣೆಗಾರರು. ಅವರ ಮೇಲೆ ಸೂಕ್ತ ಕ್ರಮ
- ಮೇಲಧಿಕಾರಿಗಳ ಅನುಮತಿಯಿಲ್ಲದೆ, ವಹಿಸಿದ ಕರ್ತವ್ಯ ನಿಭಾಯಿಸಲು ವಿಫಲನಾಗುವ ಅಥವಾ ನಿರಾಕರಿಸುವ ಸರ್ಕಾರಿ ಅಧಿಕಾರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ
- ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ ಇರುವ ಪ್ರದೇಶಗಳಲ್ಲಿ ಮನೆಯಿಂದ ಹೊರಗೆ ಬಂದಲ್ಲಿ, ಮಾಸ್ಕ್ ಧರಿಸದೇ ಇದ್ದಲ್ಲಿ, ರಸ್ತೆಯಲ್ಲಿ ಉಗುಳಿದರೆ ಕೂಡ ಶಿಕ್ಷೆ