ಜಾತಕ ಬರಹಗಾರರು, ಜಾತಕ ವಿಶ್ಲೇಷಣೆಗಾರರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಕೆಲವೊಮ್ಮೆ ಸರಿಯಾದ ಜಾತಕ ವಿಶ್ಲೇಷಣೆ ಮಾಡದೆ ಆದ ಮದುವೆ ಅಥವಾ ಪ್ರೀತಿಸಿ ಮಾಡಿಕೊಂಡ ವಿವಾಹದಲ್ಲಿ ಗಂಡ- ಹೆಂಡತಿ ಮಧ್ಯೆ ನಿತ್ಯವೂ ಜಗಳ- ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಮನೆಯಲ್ಲಿ ಸದಾ ಕಲಹ. ಯಾಕಾಗಿ ಈ ರೀತಿಯ ನೋವು ಅನುಭವಿಸಬೇಕಾಗುತ್ತದೆ? ಎಂಬ ಬಗ್ಗೆ ಕೆಲವು ಮುಖ್ಯ ಸಲಹೆಗಳನ್ನು ಇಲ್ಲಿ ನೀಡಲಾಗುತ್ತಿದೆ.
* ವಧು- ವರರ ಸಾಲಾವಳಿ ನೋಡುವಾಗ ಗುಣ, ಕೂಟ ಆಗಿಬಂದರೆ ಸಾಕು ಎಂದು ಕೆಲವು ಜ್ಯೋತಿಷಿಗಳನ್ನು ವಿವಾಹ ನಿಶ್ಚಯ ಮಾಡಿಕೊಡುತ್ತಾರೆ. ಲಗ್ನ ಕುಂಡಲಿಯಾಗಲಿ, ನವಾಂಶ ಕುಂಡಲಿಯಾಗಲೀ ವಧು- ವರರ ಜಾತಕದಲ್ಲಿನ ದೋಷಗಳನ್ನಾಗಲೀ ಪರಾಂಬರಿಸುವುದಿಲ್ಲ. ಹೀಗೆ ಮದುವೆಯಾದ ನಂತರ ನಿತ್ಯವೂ ಒಂದಿಲ್ಲೊಂದು ರಗಳೆ ಇರುತ್ತದೆ.
* ಮದುವೆ ವಿಚಾರಕ್ಕೆ ಬಂದಾಗ ಜನ್ಮ ಜಾತಕದಲ್ಲಿ ಗಂಡು- ಹೆಣ್ಣು ಇಬ್ಬರಿಗೂ ಲಗ್ನದಿಂದ ಸಪ್ತಮ ಸ್ಥಾನ ಬಹಳ ಮುಖ್ಯವಾದದ್ದು, ಆ ನಂತರ ಇಬ್ಬರಿಗೂ ಪಂಚಮ ಸ್ಥಾನ (ಸಂತಾನ) ಹಾಗೂ ಹೆಣ್ಣಿಗೆ ಲಗ್ನದ ಅಷ್ಟಮ ಸ್ಥಾನ (ಆಯುಷ್ಯ) ಕೂಡ ಮುಖ್ಯವಾದದ್ದು. ಇವೆಲ್ಲವನ್ನೂ ಸರಿಯಾಗಿ ಪರಾಂಬರಿಸಿ, ಆ ನಂತರ ನವಾಂಶ ಕುಂಡಲಿ ಹೇಗಿದೆ ಎಂದು ಸಹ ಗಮನಿಸಬೇಕು.
* ಇಲ್ಲಿ ಕೆಲವು ನಕ್ಷತ್ರ ಅಥವಾ ರಾಶಿಯ ಹೆಸರನ್ನು ಹೇಳಲು ಹೋಗುವುದಿಲ್ಲ. ಆದರೆ ಅವುಗಳ ಸಮಸ್ಯೆಯನ್ನು ತಿಳಿಸುತ್ತೇನೆ. ಏನೇ ಮಾಡಿದರೂ ಅವರ ಅನುಮಾನವನ್ನು ಪರಿಹರಿಸುವುದಕ್ಕೆ ಸಾಧ್ಯವೇ ಇಲ್ಲ. ಕೆಲವರಿಗೆ ಅದ್ಯಾವ ಪರಿಯ ಸಿಟ್ಟು ಅಂದರೆ, ಆ ಸಮಯದಲ್ಲಿ ಅದೇನಮಾಡುತ್ತಿದ್ದೇನೆ ಎಂಬ ಪರಿವೆ ಇರುವುದಿಲ್ಲ. ಹಠದ ಸ್ವಭಾವ ಇರುವ ನಕ್ಷತ್ರಗಳು ಯಾವುದರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ.
* ಇವು ಆಯಾ ಲಗ್ನ ಅಥವಾ ನಕ್ಷತ್ರ ಅಥವಾ ಗ್ರಹ ಸ್ಥಿತಿಯಲ್ಲಿ ಜನಿಸಿದವರ ಜೀವದ ಸ್ವಭಾವ ಆಗಿರುತ್ತದೆ. ಅದನ್ನು ಬದಲಿಸುವುದೇ ಕಷ್ಟಸಾಧ್ಯ. ಇನ್ನು ಸಪ್ತಮ ಸ್ಥಾನದಲ್ಲಿ ರಾಹು ಅಥವಾ ಕೇತು ಅಥವಾ ಕುಜ ಅಥವಾ ಶನಿ ಇದ್ದಲ್ಲಿ ಆಯಾ ಗ್ರಹಕ್ಕೆ ತಕ್ಕಂತೆ ಫಲ ಅನುಭವಿಸಬೇಕಾಗುತ್ತದೆ. ಜಾತಕದಲ್ಲಿ ರಾಹು- ಗುರು, ರವಿ- ಶುಕ್ರ ಇಂಥ ಗ್ರಹ ಸಂಯೋಗದಿಂದಲೂ ಸಮಸ್ಯೆಗಳು ಎದುರಾಗುತ್ತವೆ.
* ಇಂಥ ದೋಷಗಳನ್ನು ಪರಿಹರಿಸುವುದಕ್ಕೆ ವಿವಾಹದ ಪೂರ್ವದಲ್ಲಿ ಕೆಲವು ಶಾಂತಿ, ಹವನ, ಅಥವಾ ಜಪ ಮಾಡಿಕೊಳ್ಳಬೇಕು. ಒಂದು ವೇಳೆ ಮದುವೆ ಆಗಿದೆ ಅಂತಾದರೆ ಕೆಲವು ನಿರ್ದಿಷ್ಟ ತೀರ್ಥ ಕ್ಷೇತ್ರಗಳಿಗೆ ನಿರ್ದಿಷ್ಟ ಸಮಯದಲ್ಲಿ ದರ್ಶನಕ್ಕೆ ತೆರಳುವ ಮೂಲಕ ಪರಿಹಾರ ಮಾಡಿಕೊಳ್ಳಬೇಕು.
ಲಗ್ನಕ್ಕೆ ಏಳನೇ ಮನೆಯಲ್ಲಿ ಯಾವ ಗ್ರಹ ಇದೆ, ಆ ರಾಶಿಯ ಅಧಿಪತಿ ಯಾವ ಮನೆಯಲ್ಲಿ ಇದೆ, ಸಪ್ತಮ ಸ್ಥಾನದ ಮೇಲೆ ಯಾವ ಗ್ರಹದ ದೃಷ್ಟಿ ಇದೆ ಮತ್ತು ಗ್ರಹದ ಬಲಾಬಲವನ್ನು ಲೆಕ್ಕ ಹಾಕಬೇಕು. ಮದುವೆ ಆಗುವ ಮುನ್ನ ಜಾತಕ ತೋರಿಸುವಾಗಲೇ ಸರಿಯಾದ ವಧು ಅಥವಾ ವರನನ್ನು ಆರಿಸಿಕೊಳ್ಳುವುದು ಮುಂಜಾಗ್ರತೆಯಾಗುತ್ತದೆ.
ಒಂದು ವೇಳೆ ಮದುವೆ ಆಗಿದೆ. ಈಗ ಗಂಡ- ಹೆಂಡತಿ ಮಧ್ಯೆ ಹೊಂದಾಣಿಕೆ ಆಗುತ್ತಿಲ್ಲ ಎಂದಾದಲ್ಲಿ ಕೆಲವು ಪೂಜೆ, ಹವನ, ತೀರ್ಥ ಕ್ಷೇತ್ರಗಳ ದರ್ಶನ ಅಥವಾ ಜಪಗಳನ್ನು ಮಾಡುವ ಮೂಲಕ ಪರಿಹರಿಸಿಕೊಳ್ಳಬಹುದು. ಆದರೆ ಪರಿಹಾರಕ್ಕಾಗಿ
ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ
ಸಂಪರ್ಕಿಸಿ ಸೋಮಶೇಖರ್B.Sc
ಜಾತಕ ಬರಹಗಾರರು, ವಿಶ್ಲೇಷಣೆಗಾರರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403