ಡಿವಜಿ ಸುದ್ದಿ, ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹಾಗೂ ರಾಜಕಾರಣಿ ಪದ್ಮಾವತಿ ಖ್ಯಾತಿಯ ರಮ್ಯಾ ಕಳೆದ ಒಂದು ವರ್ಷದ ನಂತರ ಮತ್ತೆ ಸಾಮಾಜಿಕ ಜಾಲತಾಣಗಳ ಕಡೆ ಮುಖ ಮಾಡಿದ್ದಾರೆ. ಟ್ವಿಟರ್ ಖಾತೆ ಆಕ್ಟೀವ್ ಆಗಿದೆ.
ಕಳೆದೊಂದು ವರ್ಷದದಿಂದ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದ ಪದ್ಮಾವತಿ. ತಮ್ಮ ಟ್ವಿಟರ್ ಖಾತೆ ಆಕ್ಟೀವ್ ಮಾಡಿದ್ದಾರೆ. ರಮ್ಯಾ ಟ್ವಿಟರ್‌ಗೆ ಮರಳಿರುವುದಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ರಮ್ಯಾ ಟ್ವಿಟರ್ ಖಾತೆ ಡಿಲೀಟ್ ಮಾಡಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದ್ದವು. ಜೂನ್ 1ರಂದು ಅವರು ಕೊನೆಯ ಟ್ವೀಟ್ ಮಾಡಿದ್ದರು. ಕಳೆದೊಂದು ವರ್ಷದಲ್ಲಿ ರಮ್ಯಾ ಎಲ್ಲಿದ್ದರೂ ಎಂಬುದರ ಬಗ್ಗೆಯೂ ಯಾವುದೇ ಮಾಹಿತಿಗಳು ಇರಲಿಲ್ಲ. ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾಗಿತ್ತು.
ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ನಂಬರ್ 1 ನಟಿಯಾಗಿದ್ದ ರಮ್ಯಾ, 2016ರ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ರಾಜಕರಾಣಕ್ಕೆ ಬಂದ ರಮ್ಯಾ ಕಾಂಗ್ರೆಸ್ ಪಕ್ಷ ಸೇರಿ ಸಂಸದೆಯಾಗಿ ಆಯ್ಕೆಯಾಗಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಟ್ವೀಟ್‌ಗಳ ಮೂಲಕ ಟಾಂಗ್ ಕೊಡುತ್ತಿದ್ದ ಭಾರೀ ಸುದ್ದಿಯಲ್ಲಿದ್ದರು.