Connect with us

Dvgsuddi Kannada | online news portal | Kannada news online

ಅವಶ್ಯಕ ವಾಹನಗಳ ದುರಸ್ತಿ: ಆಟೋಮೊಬೈಲ್ಸ್ ಶಾಪ್ ಗಳಿಗೆ ಷರತ್ತುಬದ್ಧ ಅನುಮತಿ

ಪ್ರಮುಖ ಸುದ್ದಿ

ಅವಶ್ಯಕ ವಾಹನಗಳ ದುರಸ್ತಿ: ಆಟೋಮೊಬೈಲ್ಸ್ ಶಾಪ್ ಗಳಿಗೆ ಷರತ್ತುಬದ್ಧ ಅನುಮತಿ

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲೆಯ 108 ತುರ್ತು ವಾಹನಗಳ ದುರಸ್ತಿ ಮಾಡಿಸಲು ಅವಶ್ಯವಿರುವ ಆಟೋಮೊಬೈಲ್ಸ್ ಮತ್ತು ವರ್ಕ್‍ಶಾಪ್ ತೆರೆಯಲು ಜಿಲ್ಲಾಧಿಕಾರಿ ಷರತ್ತು ವಿಧಿಸಿ ಅನುಮತಿ ನೀಡಿದ್ದಾರೆ.

ಹರಿಹರ ರಸ್ತೆಯ ಮಹಾಲಕ್ಷ್ಮಿ ಆಟೋಮೊಬೈಲ್ಸ್, ಎಸ್.ಎಸ್.ಕೆ.ಗ್ಯಾರೇಜ್, ಇದಾಯತ್ ಗ್ಯಾರೇಜ್,   ಪಿ.ಬಿ. ರಸ್ತೆಯ ಮೆ|| ಮಲ್ಲಿಕಾರ್ಜುನ ಸೇಲ್ಸ್ & ಸರ್ವಿಸ್,  ಶಾಮನೂರು ರಸ್ತೆಯ ಲಕ್ಷ್ಮೀ ಪಂಚರ್ ಶಾಪ್ , ಹರಿಹರದ  ಸದರನ್ ಗ್ಯಾಸ್ ಏಜೆನ್ಸಿ ಆಟೋಮೊಬೈಲ್ಸ್ ಮತ್ತು ವರ್ಕ್‍ಶಾಪ್‍ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಷರತ್ತುಗಳು : ಪರಿಶುದ್ದತೆ, ನೈರ್ಮಲ್ಯ, ಅಗತ್ಯ ಸುರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿರುತ್ತದೆ. ಕೆಲಸ ನಿರ್ವಹಿಸುವವರೆಲ್ಲರೂ ಕಡ್ಡಾಯವಾಗಿ ಮಾಸ್ಕ್‍ಗಳನ್ನು ಧರಿಸತಕ್ಕದ್ದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳತಕ್ಕದ್ದು.
ಮಾಲೀಕರುಗಳು ಸೇರಿದಂತೆ ಆಟೋಮೊಬೈಲ್/ಗ್ಯಾರೇಜ್ ಕೆಲಸಗಾರರಿಗೆ ಕೆಮ್ಮು, ಶೀತ, ಜ್ವರದ ಲಕ್ಷಣ ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸಬೇಕು.ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯಗಳಲ್ಲಿ ಸ್ಯಾನಿಟೈಸರ್/ಸೋಪ್ ವ್ಯವಸ್ಥೆ ಮಾಡಬೇಕು.

ಮೇಲ್ಕಂಡ ಷರತ್ತುಗಳನ್ನು ಉಲ್ಲಂಘಿಸುವವರ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 188 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರವರೆಗೆ ಕಾನೂನುಗಳನ್ವಯ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿಗಾಗಿ ವಾಟ್ಸಾಪ್ : 7483892205

ಇಮೇಲ್: dvgsuddi@gmail.com

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top