ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಎಂಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ನಿವಾರಕ ಮಾರ್ಗ ನಿರ್ಮಾಣ ಮಾಡಿದ್ದು, ಇಂದು ಮೇಯರ್ ಅಜಯ್ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಚಾಲನೆ ನೀಡಿದರು.

ಚಾಲನೆ ನಂತರ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಎಂಪಿಎಂಸಿ ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ವಾಹನಗಳು ಬರಲಿದ್ದು, ಅವರು ಸೋಂಕು ಹೊತ್ತು ಬರುವ ಸಾಧ್ಯತೆ. ಇದಲ್ಲದೆ ಈ ಪ್ರದೇಶದಲ್ಲಿ ವಾಹನ ದಟ್ಟಣಿ ಕೂಡ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಎಂಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಸೊಂಕು ನಿವಾರಕ ಮಾರ್ಗ ತೆರೆಯಲಾಗಿದೆ ಎಂದರು.

ನಗರದಲ್ಲಿ ಜನದಟ್ಟಣಿ ಇರುವ ಇನ್ನು 5 ಕಡೆ ತೆರೆಯುವ ಯೋಜನೆ ಇದೆ. ಸಂಸದರು ಕೂಡ ತಮ್ಮ ಟ್ರಸ್ಟ್ ಮೂಲಕ 5 ಕಡೆ ಕೊರೊನಾ ನಿವಾರಕ ಮಾರ್ಗ ತೆರೆಯಲು ಆಸಕ್ತಿ ತೋರಿದ್ದಾರೆ. ಸೌಕ್ಯ ಆಸ್ಪತ್ರೆ ಕೂಡ 5 ಕಡೆ ಇಂತಹ ಮಾರ್ಗ ತೆರೆಯಲು ಆಸಕ್ತಿ ತೋರಿವೆ ಎಂದರು.
ಕೊರೊನಾ ಸೋಂಕು ನಿವಾರಣೆಯಲ್ಲಿ ಸರ್ಕಾರ ಸೂಚಿಸಿದ ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಎಲ್ಲರು ಪಾಲನೆ ಮಾಡಬೇಕು. ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳಿಲ್ಲ. ಹೀಗಾಗಿ ಸೆಕೆಂಡರಿ ಕಾಂಟೆಕ್ಟ್ ಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೊರ ಜಿಲ್ಲೆಯಿಂದ ಬಂದವರು ಜಿಲ್ಲೆಯಲ್ಲಿ 19 ಸಾವಿರ ಜನರಿದ್ದಾರೆ. ಹಾಗೆಯೇ ಹೊರ ರಾಜ್ಯದಿಂದ ಬಂದ 40 ಜನರನ್ನು ಲಿಸ್ಟ್ ಮಾಡಲಾಗಿದ್ದು, ಅವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದರು.
ವಾಟ್ಸಾಪ್ : 7483892205
ಇಮೇಲ್: dvgsuddi@gmail.com



