ಡಿವಿಜಿ ಸುದ್ದಿ,ದಾವಣಗೆರೆ : ಮಹಾನಗರಪಾಲಿಕೆಯ 14 ನೇ ವಾರ್ಡಿನ ಕಾರ್ಪೊರೇಟರ್ ಚಮನ್ ಸಾಬ್ ನೇತೃತ್ವದ ಹುಸೇನಿಯ ಫೌಂಡೇಶನ್ ವತಿಯಿಂದ ಒಂದು ಸಾವಿರ ಕುಟುಂಬಗಳಿಗೆ ಆಹಾರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅಕ್ಕಿ, ರವೆ, ಅವಲಕ್ಕಿ, ಸಕ್ಕರೆ, ಬೇಳೆ, ಅಡಿಗೆ ಎಣ್ಣೆ ಒಳಗೊಂಡ ಆಹಾರ ಕಿಟ್ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ವಿತರಿಸಿದರು.

ನಗರದ ಜುಬ್ಲಿ ಬಾವಿ ರಸ್ತೆಯ ಗರಡಿ ಮನೆಯಿಂದ ಪ್ರಾರಂಭಿಸಿ ಹುಬ್ಬಳ್ಳಿ ಚೌಡಪ್ಪನ ಗಲ್ಲಿ, ಹೊಸ ಪಿಂಜಾರ ಗಲ್ಲಿ, ಹೊಸ ಮಸೀದಿ ರಸ್ತೆ, ನರಸರಾಜ ಪೇಟೆ, ಅಮರಪ್ಪನ ತೋಟದ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಹುಸೇನಿಯ ಫೌಂಡೇಶನ್ ನ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು, ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ,
ಪಾಲಿಕೆಯ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಕಾರ್ಪೊರೇಟರ್ ಕೆ. ಚಮನ್ ಸಾಬ್ ಮೇಯರ್ ಅಜಯ್ ಕುಮಾರ್ ಕಾಂಗ್ರೆಸ್ ಮುಖಂಡರಾದ ಡಿ. ಬಸವರಾಜ್, ಸೈಯದ್ ಸೈಫುಲ್ಲಾ, ಪಾಲಿಕೆ ವಿರೋಧ ಪಕ್ಷದ ನಾಯಕ ನಾಗರಾಜ್, ಹುಸೇನಿಯ ಫೌಂಡೇಶನ್ ಅಧ್ಯಕ್ಷರಾದ ಕೆ. ಖಾದರ್ ಸಾಬ್, ಸದಸ್ಯರಾದ ಭಾಷಾ ಸಾಬ್, ಜಬಿ ಉಲ್ಲಾ, ರಹಮತ್ ಉಲ್ಲಾ, ಅಹಮದ್ ರಜ್ಜ, ಮಹಮ್ಮದ್ ಜಬಿ, ಪಾಲಿಕೆ ಸದಸ್ಯರುಗಳಾದ ಎ.ಬಿ ರಹಿಮ್ ಸಾಬ್, ಗಡಿ ಗುಡಾಳ ಮಂಜುನಾಥ್, ಕಬೀರ್, ಹುಲ್ಲುಮನೆ ಗಣೇಶ್, ನಿಟುವಳ್ಳಿ ಚಂದ್ರು, ಅಲ್ಲಾಹುಲ್ಲಿ ಗಝಿಖನ್, ಖಾಜಿ ಖಲೀಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ, ಪತ್ರಕರ್ತರಿಗೆ ಹಾಗೂ 14ನೇ ವಾರ್ಡ್ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು. ಜಾಮಿಯಾ ಮಸೀದಿ ಕಕ್ಕರಗೊಳ್ಳದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25000 ದೇಣಿಗೆ ನೀಡಿದ್ದು ವಿಶೇಷವಾಗಿತ್ತು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ತಿಳಿಸಿದರು.



