ಡಿವಿಜಿ ಸುದ್ದಿ, ಹರಪನಹಳ್ಳಿ : ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ರಾತ್ರಿ ಸುರಿದ ಗಾಳಿ ಸಹಿತ ಭಾರೀ ಮಳೆ ಬಾಳೆ ನೆಲಕ್ಕೆ ಉರುಳಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ಹಲವು ದಿನಗಳಿಂದ ಕೊರೊನ ಭೀತಿಯಿಂದ ರೈತರೂ ಬೆಳೆದ ಬಾಳೆಹಣ್ಣಿಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಹಾಗೂ ಮಳೆಗೆ ಸುಮಾರು 3 ಎಕೆರೆಯಲ್ಲಿ ಬೆಳೆದ ಬಾಳೆ ನಾಶವಾಗಿದೆ. ಕಷ್ಟಪಟ್ಟು ಬೆಳೆದ ಬಾಳೆ ಕೈ ಸೇರುವ ಮುನ್ನ ಮಣ್ಣು ಸೇರಿದ್ದು, ತುಂಬಾ ನಷ್ಟವಾಗಿದೆ ಎಂದು ಗಂಗಮ್ಮ ತಿಳಿಸಿದ್ದಾರೆ.



