ಡಿವಿಜಿಸುದ್ದಿ.ಕಾಂ, ಜಗಳೂರು : ಮಹಿಳೆಯನ್ನು ವಶೀಕರಿಸಲು ಬಂದಿದ್ದ ದಾವಣಗೆರೆ ಮೂಲದ ಇಬ್ಬರಿಗೆ ಜಗಳೂರು ತಾಲ್ಲೂಕಿನ ಉಚ್ಚಂಗಿಪುರ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಗ್ರಾಮದ ವ್ಯಕ್ತಿಯೊಬ್ಬನಿಂದ ಹಣ ಪಡೆದು ಮಹಿಳೆಯರ ವಶೀಕರಣಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ತಿಳಿದ ಗ್ರಾಮಸ್ಥರು ಆರೋಪಿಗಳಿಗೆ ಮೂಗು, ಬಾಯಲ್ಲಿ ರಕ್ತ ಬರುವಂತೆ ಥಳಿಸಿದ್ದಾರೆ.
ವಶೀಕರಣ ಮಾಡಲು ಹಣ ನೀಡಿದ್ದ ವ್ಯಕ್ತಿಯ ಹೆಸರನ್ನು ಮಾತ್ರ ಯುವಕರು ಬಾಯಿ ಬಿಡುತ್ತಿಲ್ಲ. ವಶೀಕರಣ ಮಾಡಲು ಬಂದಿದ್ದು ಮುಂಗಡವಾಗಿ 20 ಸಾವಿರ ನೀಡಿದ್ದರು ಎಂಬ ಮಾಹಿತಿ ಇದೆ. ಇನ್ನು ವಶೀಕರಣ ಮಾಡಲು ಬಂದವರು ದಾವಣಗೆರೆಯ ಗಡಿಯಾರ ಕಂಬದ ನಿವಾಸಿಗಳು. ಈ ಇಬ್ಬರನ್ನು ಗ್ರಾಮಸ್ಥರು ಇದೀಗ ಪೊಲೀಸ್ ರಿಗೆ ಒಪ್ಪಿಸಿದ್ದಾರೆ.




