ರೋಮ್ : ಇಟಲಿಯಲ್ಲಿ ಡೆಡ್ಲಿ ಕೊರೊನಾ ತನ್ನ ಭೀಕರತೆಯನ್ನು ಮೆರದಿದ್ದು, ಬುಧವಾರ ಒಂದೇ ದಿನ 475 ಮಂದಿ ಬಲಿ ಪಡೆಯುವ ಮೂಲಕ ಇಟಲಿಯಲ್ಲಿ ಮೃತರ ಸಂಖ್ಯೆ 2,978ಕ್ಕೆ ಏರಿಕೆಯಾಗಿದೆ.
ಇಡೀ ಜಗತ್ತನ್ನೇ ಭೀಕರವಾಗಿ ಕಾಡುತ್ತಿರುವ ಕೋವಿಡ್ 19 ಸೋಂಕು, ತಲ್ಲಣ ಸೃಷ್ಠಿಸಿದೆ. ಒಂದೇ ದಿನ 475 ಜನ ಮೃತಪಟ್ಟಿರುವುದು ವಿಶ್ವದಲ್ಲಿಯೇ ಇದೇ ಮೊದಲು. ಸೋಂಕಿಗೆ ಗುರಿಯಾದವರ ಸಂಖ್ಯೆ 35,713ಕ್ಕೆ ತಲುಪಿದೆ.
ಇರಾನ್ನಲ್ಲಿ 1,135 ಬಲಿ
ಇರಾನ್‍ನಲ್ಲಿ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಬುಧವಾರ 147 ಜನರು ಮೃತಪಟ್ಟಿದ್ದು, ಒಟ್ಟಾರೆ 1,135 ಜನರು ಬಲಿಯಾಗಿದ್ದಾರೆ. 17,361 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ವಿಶ್ವದ ದೊಡ್ಡಣ್ಣ ತತ್ತರ
ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಅಮೆರಿಕದ ಎಲ್ಲ 50 ರಾಜ್ಯಗಳಿಗೆ ಸೋಂಕು ವ್ಯಾಪಿಸಿದೆ. 6,500 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.



