ಡಿವಿಜಿ ಸುದ್ದಿ, ಬೆಳಗಾವಿ: ದೇಶದೆಲ್ಲಡೆ ಆತಂಕ ಉಂಟು ಮಾಡಿರುವ ಕೊರೊನಾ ವೈರಸ್‍ನಿಂದ ಕುಕ್ಕುಟೋದ್ಯಮಕ್ಕೆ ಭಾರಿ ನಷ್ಟವಾಗಿದ್ದು, ಬೆಳಗಾವಿ ಜಿಲ್ಲೆ ಕೋಳಿ ಫಾರಂ ಮಾಲೀಕರು 15 ಸಾವಿರ ಕೋಳಿಯನ್ನು ಜೀವಂತ ಸಮಾಧಿ ಮಾಡಿದ್ದಾರೆ.

ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಮತ್ತು ಗೋಕಾಕ್ ತಾಲೂಕಿನ ಲಕ್ಷ್ಮೇಶ್ವರ ಗ್ರಾಮ ಕೋಳಿ ಫಾರಂ ಮಾಲೀಕರು 15 ಸಾವಿರ ಕೋಳಿಯನ್ನು ಜೀವಂತ ಸಮಾಧಿ ಮಾಡಿದ್ದಾರೆ. ಲಕ್ಷ್ಮೇಶ್ವರ ಗ್ರಾಮದಲ್ಲಿ 8 ಸಾವಿರ ಕೋಳಿ ಹಾಗೂ ಮಸರಗುಪ್ಪಿ ಗ್ರಾಮದಲ್ಲಿ 7 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಗುಂಡಿ ತೋಡಿ ಜೀವಂತವಾಗಿ ಹೂತು ಹಾಕಿದ್ದಾರೆ.
ರಾಜ್ಯದಲ್ಲಿ 5 ಜನರಿಗೆ ಕೊರೊನಾ ವೈರಸ್ ಪಾಸಿಟಿವ್: ಶ್ರೀರಾಮುಲು
ಕೊರೊನಾ ಭೀತಿ ಹಿನ್ನೆಲೆ ಉದ್ಯಮ ನೆಲಕಚ್ಚಿದೆ. ಕೋಳಿ ಸಾಕಾಣಿಕೆ ಮಾಡಿ ಇನ್ನಷ್ಟು ನಷ್ಟ ಅನುಭವಿಸುವುದನ್ನು ತಪ್ಪಿಸಲು ಕೋಳಿಗಳನ್ನು ಮಣ್ಣು ಮಾಡಲು ಮಾಲೀಕರು ನಿರ್ಧರಿಸಿದ್ದಾರೆ. ರಾತೋರಾತ್ರಿ ಬೃಹತ್ ಗುಂಡಿಗಳನ್ನು ತೋಡಿ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ. ಇತ್ತೀಚೆಗೆ ಶಿವಮೊಗ್ಗದ ಸಂತೆಕಡೂರು ಗ್ರಾಮದಲ್ಲಿ 4 ಸಾವಿರ ಕೋಳಿ ಮರಿಗಳನ್ನು ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿತ್ತು.



