ಡಿವಿಜಿ ಸುದ್ದಿ, ಹೊನ್ನಾಳಿ: ಕೊರೊನಾ, ಕೋಳಿ ಜ್ವರ ಭೀತಿಯಿಂದ ಮೆಕ್ಕಜೋಳದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದ್ದು, ಸರ್ಕಾರ ಬೆಂಬಲ ಬೆಲೆ ಹೆಚ್ಚಳ ಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮಾಜಿ ಶಾಸಕ ಶಾಂತನಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹೊನ್ನಾಳಿಯಲ್ಲಿ ಕಾಂಗ್ರೆಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಹೊನ್ನಾಳಿ ಮಾಜಿ ಕಾಂಗ್ರೆಸ್ ಶಾಸಕ ಡಿಜಿ ಶಾಂತನ ಗೌಡರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ರೈತರಿಗೆ ಸೂಕ್ತ ನೆರವು ನೀಡುವಂತೆ ಆಗ್ರಹಿಸಿದರು.
ಸಂತ್ರಸ್ತರಿಗೆ ಇಲ್ಲಿವರೆಗೆ ನೀಡಿದ ಪರಿಹಾರ ಹಣದ ಬಗ್ಗೆ ಮಾಹಿತಿ ನೀಡಬೇಕೆಂದು ಮಾಜಿ ಶಾಸಕ ಶಾಂತನಗೌಡ ಅವರು ಒತ್ತಾಯಿಸಿದರು. ಮೆಕ್ಕೆಜೋಳ ಬೆಲೆಗೆ ಸೂಕ್ತ ಬೆಲೆ ಇಲ್ಲ, ರೈತರು ಕಂಗಾಲು ಆಗಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು ಎಂದರು.



