ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 80 ಸಾವಿರ ಮೌಲ್ಯದ ಗಾಂಜಾ ಹಾಗೂ ಬೈಕ್ ನ್ನು ಕೆಟಿಜೆ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ: ಮದುವೆಯಾಗಿ ಎರಡೇ ತಿಂಗಳಿಗೆ ಓಡಿಹೋದ ಪತ್ನಿ; ಮನನೊಂದು ಪತಿ, ಯುವತಿಯ ಸೋದರ ಮಾವ ಆತ್ಮ*ಹತ್ಯೆ
ಜ.26 ರಂದು ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶರಣಬಸವೇಶ್ವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ಸುನೀಲ್ ಕುಮಾರ, ಹೆಚ್.ಎಸ್. ಶಿವಾನಂದ ಧರೆನವರ್ ಮತ್ತು. ಸಿಬ್ಬಂದಿಯವರಾದ ಕೆ.ಟಿ.ಜೆ. ನಗರ ಠಾಣೆಯ ಸುರೇಶ್ಬಾಬು, ಮಂಜನಗೌಡ, ನಾಗರಾಜ್, ಮಂಜಪ್ಪ, ಸಿದ್ದಪ್ಪ, ಹರೀಶ್, ಹನುಮಮತಪ್ಪ ಮಡ್ಡಿ, ಶಂಕರ್, ಎ.ಆರ್.ಎಸ್.ಐ., ಅಮರೇಶ್ ಒಳಗೊಂಡ ತಂಡ ದಾಳಿ ನಡೆದಿಸಿದೆ.
ದಾವಣಗೆರೆ: ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ
ಅಂಬಿಕಾ ನಗರದ ಶೇಖರಪ್ಪ ಲೇಔಟ್ ಒಳಗಡೆ ರಸ್ತೆಯಲ್ಲಿ ಆಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ 1] ಸಲ್ಮಾನ್, ಎಂ. @ ಸಲ್ಮಾನ್ ಅನ್ಸಾರಿ (26) ವರ್ಷ, ಟ್ರಾಕ್ಟರ್ ಟ್ರಾಲಿ ವರ್ಕ್ ಶಾಪ್ನಲ್ಲಿ ಕೆಲಸ, ವಾಸ :ಕೆ.ಟಿ.ಜೆ. ನಗರ, ದಾವಣಗೆರೆ. ಹಾಲಿ ವಾಸ : ವಿನಾಯಕ ನಗರ, ದಾವಣಗೆರೆ. 2] ಮೊಹಿದ್ದೀನ್ @ ಮೊಹಿನ್ ( 26) ಕಾರ್ ಮೆಕಾನಿಕ್ ಕೆಲಸ, ವಾಸ: ವಿನೋಬನಗರ, ದಾವಣಗೆರೆಇವರುಗಳನ್ನು ಪತ್ತೆ ಮಾಡಲಾಗಿದೆ.
ಆರೋಪಿತರುಗಳಿಂದ 80 ಸಾವಿರ ರೂಪಾಯಿ ಬೆಲೆ ಬಾಳುವ 1 ಕೆಜಿ 636 ಗ್ರಾಂನಷ್ಟು ಗಾಂಜಾ, ಒಂದು ಬಜಾಜ್ ಪಲ್ಸರ್ ಬೈಕ್ ಮತ್ತು ಇತರೆ ವಸ್ತುಗಳನ್ನು ಜಪ್ತುಪಡಿಸಿಕೊಳ್ಳಲಾಗಿರುತ್ತದೆ. ಸದರಿ ಆರೋಪಿತರಾದದ ಸಲ್ಮಾನ್ ಮತ್ತು ಮೊಹಿದ್ದಿನ್ ಇವರುಗಳನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಈ ಸಂಬಂಧ ಆರೋಪಿತರ ವಿರುದ್ಧ ದಾವಣಗೆರೆ ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಶಿಸಿದ್ದಾರೆ.



