ಬೆಂಗಳೂರು: ರಾಜ್ಯಪಾಲರು ಇಂದು (ಜ.22) ವಿಶೇಷ ಅಧಿವೇಶನ ಆರಂಭದಲ್ಲಿ ಜಂಟಿ ಸದನ ಉದ್ದೇಶಿಸಿ ಮಾತನಾಡಲು ಸದನಕ್ಕೆ ಆಗಮಿಸಿ ಕೇವಲ ಒಂದೇ ವಾಕ್ಯದಲ್ಲಿ ಭಾಷಣ ಮುಗಿಸಿ ನಿರ್ಗಮಿಸಿದ ನಡೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಸೇರಿದಂತೆ ಸರ್ಕಾರದ ಸಚಿವರು, ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಭಾಷಣ ಓದದೆ ಹೊರನಡೆದ ರಾಜ್ಯಪಾಲರು; ತಡೆಯಲು ಹೋಗಿ ಜುಬ್ಬಾ ಹರಿಸಿಕೊಂಡ ಹರಿಪ್ರಸಾದ್..!
ಸರ್ಕಾರದ ಸಭಾಷಣ ಓದಾದ ರಾಜ್ಯಪಾಲರು, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತನೆ ತೋರಿದ್ದಾರೆ. ರಾಜ್ಯಪಾಲ ಗೆಹ್ಲೋಟ್ ಸಂವಿಧಾನದ ಪ್ರಕಾರ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿಲ್ಲ. ಈ ವರ್ತನೆಯ ವಿರುದ್ಧ ನಾವು ಪ್ರತಿಭಟಿಸುತ್ತೇವೆ. ಅವರ ನಡವಳಿ ಬಗ್ಗೆ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಲು ಚರ್ಚಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್ : 1 ಕೋಟಿಗೆ ಬೇಡಿಕೆ; ಮಹಿಳೆ ಬಂಧನ-4.5 ಲಕ್ಷ ವಶ
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣ ಓದದೆ, ತಮ್ಮದೇ ಭಾಷಣದ ಒಂದು ವಾಕ್ಯವನ್ನು ಓದಿದರು. ಇದು ಪ್ರತಿನಿಧಿ ಸಭೆಗೆ ಮಾಡಿದ ಅವಮಾನ.ಇದು ಭಾರತೀಯ ಸಂವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿದೆ. ಸಂವಿಧಾನದ 176 ಮತ್ತು 163 ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ರಾಜ್ಯಪಾಲರ ವರ್ತನೆಯ ವಿರುದ್ಧ ನಾವು ಪ್ರತಿಭಟಿಸಲಿದ್ದೇವೆ ಎಂದರು.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಬೇಕು. ಆರ್ಟಿಕಲ್ 176 ಸ್ಪಷ್ಟವಾಗಿ ಹೇಳುತ್ತದೆ ರಾಜ್ಯಪಾಲರ ಅವರು ತಯಾರು ಮಾಡುವ, ತಮ್ಮ ಭಾಷಣ ಓದುವಂತಹದಲ್ಲ, ಕ್ಯಾಬಿನೆಟ್ ಏನು ತಯಾರು ಮಾಡುತ್ತದೆ ಅದನ್ನ ಓದಲೇಬೇಕು ಎಂದರು.
ಜಂಟಿ ಅಧಿವೇಶನ ಜೊತೆಗೆ ವಿಶೇಷ ಅಧಿವೇಶನ ಕರೆಯಲಾಗಿತ್ತು. ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನ ತಗೆದು, ಜಿ ರಾಮ ಜಿ ಹೊಸ ಕಾಯ್ದೆ ರೂಪಿಸಿದೆ. ಇದಕ್ಕೆ ನಮ್ಮ ಸರ್ಕಾರದ ತೀವ್ರ ವಿರೊಧವಿದೆ. ಮಹತ್ಮಾಗಾಂಧಿಜೀ ಅವರ ಹೆಸರು ತೆಗೆದುಹಾಕಲಾಗಿದೆ. ಹಳ್ಳಿಗಾಡನಲ್ಲಿ ಇರುವಂತಹ ಬಡ ಕಾರ್ಮಿಕರಿಗೆ ಕನಿಷ್ಠ 100 ದಿನ ಉದ್ಯೋಗ ಕೊಡಬೇಕು ಎಂಬುದು ಈ ಮನೇರೆಗಾ ಕಾಯ್ದೆಯಲ್ಲಿತ್ತು. ಇದರಲ್ಲಿ ಉದ್ಯೋಗ ಕೊಡುತ್ತಿವೆ ಎಂಬುವುದು ಖಾತ್ರಿ ಇಲ್ಲ.ಮೊದಲು ಅವರ ಜಮೀನಿನಲ್ಲಿ ಕೆಲಸ ಮಾಡಬಹುದಿತ್ತು, ಇದರಲ್ಲಿ ಎಲ್ಲಿ ಕೆಲಸ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತದೆ ಎಂದರು.



