ಡಿವಿಜಿ ಸುದ್ದಿ, ದಾವಣಗೆರೆ: ಮಾ.14 ರಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ತೂಲಹಳ್ಳಿ ಗ್ರಾಮದ ಶ್ರೀ ವಿಶ್ವಬಂಧು ಮರುಳ ಸಿದ್ದೇಶ್ವರ ದೇವಸ್ಥನದ ಕಳಸರೋಹಣ ಸಮಾರಂಭ, ಶ್ರೀ ಗುರು ಶಾಂತರಾಜದೇಶಿಕೇಂದ್ರ ಸ್ವಾಮೀಜಿ ಕಲ್ಯಾಣ ಮಂದಿರ ಹಾಗೂ ಕೆನರಾ ಬ್ಯಾಂಕ್ ಕಟ್ಟಡ ಉದ್ಘಾಟನೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ.
ವಿಶೇಷ ಆಹ್ವಾನಿತರಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಸಚಿವ ಆನಂದ್ ಸಿಂಗ್, ಬಳ್ಳಾರಿ ಸಂಸದ ವೈ. ದೇಏಂದ್ರಪ್ಪ, ಕೊಟ್ಟೂರು ತಾಲ್ಲೂಕು ಸಾದು ಲಿಂಗಾಯತ ಸಮಾಜದ ಅಧ್ಯಕ್ಷ ಡಾ. ಬಿ.ಸಿ. ಮೂಗಪ್ಪ, ಕೂಡ್ಲಿಗಿ ಶಾಸಕ ವೈ. ಗೋಪಾಲ ಕೃಷ್ಣ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಬಳ್ಳಾರಿ ಗ್ರಾಮಾಂತರ ಸಾಸಕ ಬಿ. ನಾಗೇಂದ್ರ, ಜಗಳೂರು ಶಾಸಕ ಎಸ್.ವಿ ರಾಮಚಂದ್ರ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ತರಳಬಾಳು ಪರಂಪರೆಯ ವಿಷಯವಾಗಿ ಎಚ್. ಎಸ್. ರವಿ ಉಪನ್ಯಾಸ ನೀಡಲಿದ್ದಾರೆ. ಶ ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ವಿಷಯ ಕುರಿತು ಜಿಲ್ಲಾ ಪರಿಸರ ಅಧಿಕಾರಿ ಡಾ. ಕೆ.ಬಿ. ಕೊಟ್ರೇಶ್ ಉಪನ್ಯಾಸ ನೀಡಲಿದ್ಧಾರೆ. ಮರಳಸಿದ್ದೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರ ಯು. ಚನ್ನಬಸಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.