ದಾವಣಗೆರೆ: ದಾವಣಗೆರೆ ಹೊರ ವಲಯದ ಅಪೂರ್ವ ರೆಸಾರ್ಟ್ ಮದುವೆಗೆ ಕಾರ್ಯಕ್ರಮದಲ್ಲಿ ಕಳ್ಳತನವಾಗಿದ್ದ 51.49 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಜಿಲ್ಲಾ ಪೊಲೀಸರು ಮಧ್ಯಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದು, ಕಳ್ಳತನವಾಗಿದ್ದ ಚಿನ್ನ ಪತ್ತೆಯಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಅಲರ್ಟ್ ಆಗಿದ್ದಾರೆ.
ದಾವಣಗೆರೆ: 2,400 ದರದಲ್ಲಿ ಮೆಕ್ಕೆಜೋಳ ಖರೀದಿ ಶುರು; ಜಿಲ್ಲೆಯಲ್ಲಿ 730 ಮೆಟ್ರಿಕ್ ಟನ್ ಖರೀದಿ ಗುರಿ; ಡಿಸಿ ಆದೇಶ
ಜಿಲ್ಲಾ ಪೊಲೀಸರು ರೆಸಾರ್ಟ್ ಸಿಸಿ ಟಿವಿ ಆಧಾರಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. 14 ದಿನ ಮಧ್ಯಪ್ರದೇಶದಲ್ಲಿ ಮಾರುವೇಷ ಕಾರ್ಯಾಚರಣೆ ನಡೆಸಿ ಆರೋಪಿಗಳ ಮನೆ ಪತ್ತೆ ಮಾಡಿದ್ದಾರೆ. ಈ ವೇಳೆ ಒಟ್ಟು 51,49,000 ರೂಪಾಯಿ ಮೌಲ್ಯದ ಚಿನ್ನದ ವಿವಿಧ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ವೇಳೆ ಆರೋಪಿಗಳಾದ ಮಧ್ಯಪ್ರದೇಶ ರಾಜ್ಯದ ರಾಜ್‌ಗಡ್ ಜಿಲ್ಲೆಯ ನರಸಿಂಗ್ ತಾಲ್ಲೂಕಿನ ಗುಲ್‌ಖೇಡಾದ ಕರಣ್ ವರ್ಮಾ ಅಲಿಯಾಸ್ ಕರಣ್ ಸಿಸೊಡಿಯಾ, ವಿನಿತ್ ಸಿಸೊಡಿಯಾ ತಪ್ಪಿಸಿಕೊಂಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ದಾವಣಗೆರೆ: ಬಾಲ್ಯ ವಿವಾಹವನ್ನು ತಡೆದ 112 ಪೊಲೀಸ್
ಈ ಕಳ್ಳತನ ಪ್ರಕರಣ ಹಿನ್ನೆಲೆ: ನವೆಂಬರ್ 14ರಂದು ಪ್ರವೀಣ್ ಕುಮಾರ್ ತಾಯಿ ಸೋದರ ಮಾವನ ಮಗ ವರುಣ್ ಮದುವೆ ನವೆಂಬರ್ 14 ಮತ್ತು 15ರಂದು 2 ದಿನಗಳ ಕಾಲ ದಾವಣಗೆರೆಯ ಹೈ ವೇ ಪಕ್ಕದಲ್ಲಿರುವ ಅಪೂರ್ವ ರೆಸಾರ್ಟ್ ನಲ್ಲಿ ಆಯೋಜಿಸಲಾಗಿತ್ತು. ಸಂಬಂಧಿಕರೊಂದಿಗೆ ನವೆಂಬರ್ 14ರಂದು 2.30ಕ್ಕೆ ಅಪೂರ್ವ ರೆಸಾರ್ಟ್ ಬಂದು ಊಟ ಮಾಡಿ ನಂತರ ದಾವಣಗೆರೆಯ ಬಾಪೂಜಿ ಕಾಲೇಜ್ ಹತ್ತಿರ ಒಂದು ಸರ್ವೀಸ್ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದೆವು. ಅದೇ ದಿನ ಸಂಜೆ 7.30ಕ್ಕೆ ಅಲ್ಲಿಂದ ನಾವು ಅಪೂರ್ವ ರೆಸಾರ್ಟ್ ಗೆ ಹೋದೆವು. ಈ ವೇಳೆ ಮದುವೆ ವೇಳೆ ಧರಿಸಲು ತಂದಿದ್ದ ಒಡವೆಗಳಿದ್ದ ಪಿಂಕ್ ಕಲರ್ ಬ್ಯಾಗ್ ಅನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದೆವು.
ಮದುವೆ ಈವೆಂಟ್ ಶುರುವಾದಾಗ ಒಡವೆ ಇದ್ದ ಬ್ಯಾಗ್ ಅನ್ನು ನನ್ನ ತಾಯಿ ಪದ್ಮಾವತಿ ಅವರು ರಾತ್ರಿ ಸುಮಾರು 8.54ರ ಸುಮಾರಿನಲ್ಲಿ ಚಪ್ಪಾಳೆ ಹೊಡೆಲು ಕುಳಿತಿದ್ದ ಚೇರ್ ಪಕ್ಕದಲ್ಲಿ ಇಟ್ಟಿದ್ದರು. ಸ್ವಲ್ಪ ಸಮಯದ ಬಳಿಕ ಬ್ಯಾಕ್ ಇರಲಿಲ್ಲ. ಆಗ ಈವೆಂಟ್ ವಿಡಿಯೋ ಪರಿಶೀಲಿಸಿದಾಗ ಯಾರೋ ಒಬ್ಬ ವ್ಯಕ್ತಿ ಬಂದು ತಾಯಿಯವರ ಹಿಂದಿನ ಚೇರ್ ಮೇಲೆ ಕುಳಿತಿದ್ದು ಕಂಡು ಬಂದಿದೆ.ತಾಯಿಯವರು ಕೆಳಗೆ ಇಟ್ಟಿದ್ದ ಒಡವೆಗಳು ಬ್ಯಾಗ್ ಅನ್ನು ಗೊತ್ತಾಗದಂತೆ ಕಳ್ಳತನ ಮಾಡಿಕೊಂಡು ತೆಗೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.
ದಾವಣಗೆರೆ: ಪ್ರಾಡಕ್ಟ್ ರಿವ್ಯೂವ್ ನೀಡಿದ್ರೆ
ಕಮಿಷನ್ ನೀಡುವ ಆಮಿಷ; 39.36ಲಕ್ಷ ವಂಚನೆ
ಕಳ್ಳತನಾಗಿದ್ದ ಚಿನ್ನ ಎಷ್ಟು..?
ಬಂಗಾರದ 1 ಡಾಬು ಸುಮಾರು 200 ಗ್ರಾಂ, ಬಂಗಾರದ 1 ಅರವಂಕಿ ಸುಮಾರು 50 ಗ್ರಾಂ, ಬಂಗಾರದ 1 ಲಾಂಗ್ ಚೈನ್ 2 ಸ್ಟೆಪ್ ಸುಮಾರು 60 ಗ್ರಾಂ, ಬಂಗಾರದ 1 ನೆಕ್ ಲೆಸ್ ಸುಮಾರು 20 ಗ್ರಾಂ, ಬಂಗಾರದ 1 ನೆಕ್ ಲೆಸ್ ಸುಮಾರು 20 ಗ್ರಾಂ, ಬಂಗಾರದ 1 ನೆಕ್ ಲೆಸ್ ಸುಮಾರು 20 ಗ್ರಾಂ, ಬಂಗಾರದ 1 ನೆಕ್ ಲೆಸ್ ಸುಮಾರು 20 ಗ್ರಾಂ, ಬಂಗಾರದ 1 ಕೊರಳ ಚೈನ್ ಸುಮಾರು 30 ಗ್ರಾಂ, ಬಂಗಾರದ 1 ಕೊರಳ ಚೈನ್ ಸುಮಾರು 30 ಗ್ರಾಂ, ಬಂಗಾರದ 1 ಉಂಗುರ ಸುಮಾರು 3 ಗ್ರಾಂ, ಬಂಗಾರದ 1 ಉಂಗುರ ಸುಮಾರು 12 ಗ್ರಾಂ, ಬಂಗಾರದ 1 ಬ್ರಾಸ್ ಲೈಟ್ ಸುಮಾರು 25 ಗ್ರಾಂ, ಬಂಗಾರದ 1 ಜೊತೆ ಕಿವಿ ಓಲೆ ಸುಮಾರು 7 ಗ್ರಾಂ, ಬಂಗಾರದ 1 ಜೊತೆ ಕಿವಿ ಓಲೆ ಸುಮಾರು 8 ಗ್ರಾಂ, ಕರಿಮಣಿಗಳಿರುವ ಬಂಗಾರದ ಲಾಕೆಟ್ ಇದ್ದ 1 ಚೈನ್ ಸುಮಾರು 30 ಗ್ರಾಂ ಸೇರಿದಂತೆ ಒಟ್ಟು 535 ಗ್ರಾಂ ಬಂಗಾರದ ಆಭರಣಗಳು. ಒಟ್ಟು 67 ಲಕ್ಷದ 48 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು.
ಆರೋಪಿ ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



