ದಾವಣಗೆರೆ: ನೀರು ತುಂಬಿದ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಜಿಲ್ಕೆಯ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜೇಶ್ವರಿ ಮತ್ತು ಮಂಜುನಾಥ ದಂಪತಿಯ ವೇದಾ ಮೃತಪಟ್ಟ ಮಗು. ನ.25 ಬೆಳಗ್ಗೆ ಮಕ್ಕಳಾದ ರೋಜಾ, ರೋಹಿಣಿ, ವೇದಾ ಮನೆಯ ಮುಂದೆ ಆಡುತ್ತಿದ್ದರು. ಮನೆಕೆಲಸದಲ್ಲಿದ್ದ ನಿರತರಾಗಿದ್ದ ತಾಯಿ ರಾಜೇಶ್ವರಿ ಸ್ವಲ್ಪ ಸಮಯದ ನಂತರ ಮನೆಯ ಹೊರಗಡೆ ಬಂದು ನೋಡಿದಾಗ ವೇದಾ ಅಲ್ಲಿ ಇರಲಿಲ್ಲ.
ಹುಡುಕುತ್ತಾ ಮನೆಯ ಹಿಂದೆ ಹೋದಾಗ ಸ್ನಾನದ ಕೋಣೆಯಲ್ಲಿ ನೀರು ತುಂಬಿದ ಪಾತ್ರೆಯಲ್ಲಿ ಬಿದ್ದಿದ್ದಳು. ತಕ್ಷಣ ಪತಿ ಕರೆದು ಪಾತ್ರೆಯಿಂದ ಮಗುವನ್ನು ಮೇಲಕ್ಕೆ ಎತ್ತಿಕೊಳ್ಳಲಾಗಿದೆ. ಕೂಡಲೇ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ದಾವಣಗೆರೆ: ಕುಂದುವಾಡ ಕೆರೆಯಲ್ಲಿ ಯುವಕರಿಬ್ಬರ ಮೃತದೇಹ ಪತ್ತೆ
ನನ್ನ ಮಗಳು ಮೃತಪಟ್ಟಿರುವ ಬಗ್ಗೆ ನಮಗೆ ಬೇರೆ ಯಾವುದೇ ಅನುಮಾನವಿರುವುದಿಲ್ಲ ಎಂದು ತಂದೆ ಮಂಜುನಾಥ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮೃತ ಕುಟುಂಬಕ್ಕೆ ವೈಯಕ್ತಿಕವಾಗಿ 25000 ರೂ. ಸಹಾಯಧನ ನೀಡಿದ್ದಾರೆ.



