ಡಿವಿಜಿ ಸುದ್ದಿ, ರಾಮನಗರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ವೇಳೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಮಾಡುವಂತೆ ನಾನು ಒತ್ತಾಯಿಸಿದ್ದೆ. ಆದರೆ, ಕೇಂದ್ರ ಕಾಂಗ್ರೆಸ್ ನಾಯಕರು ಖರ್ಗೆ ಸಿಎಂ ಆಗಲು ಒಪ್ಪಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಕೇಂದ್ರದ ಕಾಂಗ್ರೆಸ್ ನಾಯಕರೇ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಮಾಡಿದರು. ನಾವು ಯಾವತ್ತೂ ಅಧಿಕಾರವನ್ನು ಕೇಳಿರಲಿಲ್ಲ ಎಂದರು.
ಪ್ರಾದೇಶಿಕ ಪಕ್ಷ ಉಳಿಸುವ ಛಲ, ಹಟವಿದೆ. ಸಾಯುವವರೆಗೂ ಕೂಡಾ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.



