ದಾವಣಗೆರೆ: ಟ್ರ್ಯಾಕ್ಟ ರ್ ರೊಟೊವೇಟರ್ಗೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಜಗಳೂರು ತಾಲ್ಲೂಕಿನ ದಿದ್ದಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದಿ, ಜಮೀನಿನಲ್ಲಿ ಟ್ರ್ಯಾಕ್ಟರ್ ರೊಟೊವೇಟರ್ಗೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ದಿದ್ದಿಗೆ ಗ್ರಾಮದ
ನಾರಪ್ಪ (28)ಮೃತಪಟ್ಟ ಯುವಕ.
ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ನಾರಪ್ಪ, ಆಕಸ್ಮಿಕವಾಗಿ ರೊಟೊವೇಟರ್ ಯಂತ್ರಕ್ಕೆ ಸಿಲುಕಿದ್ದಾನೆ. ದೇಹ ಯಂತ್ರಕ್ಕೆ ಸಿಕ್ಕ ನಂತರ ಮಣ್ಣು ಕೊಚ್ಚಿದಂತೆ ಕೊಚ್ಚಿದೆ. ಇದರಿಂದ ದೇಹ ನಜ್ಜುಗುಜ್ಜಾಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ಮಹಿಳೆ ಸಾವು
ಮೆಕ್ಕೆಜೋಳ ಕಟಾವು ಕಾರ್ಯದಲ್ಲಿ ನಿರತವಾಗಿದ್ದ ಜಗಳೂರು ತಾಲ್ಲೂಕಿನ ಖಿಲಾ ಕಣಕುಪ್ಪೆ ಗ್ರಾಮದ ಮಹಿಳೆಯೊಬ್ಬರು ಹಾವು ಕಚ್ಚಿ ಮೃತಪಟ್ಟಿದ್ದಾರೆ.
ಗ್ರಾಮದ ಗಂಗಮ್ಮ (35) ಮೃತಪಟ್ಟವರು. ಹಾವು
ಅಸ್ವಸ್ಥಗೊಂಡಿದ್ದ ಇವರನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯೆ ಕೊನೆಯುಸಿ
ರೆಳೆದಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



