ದಾವಣಗೆರೆ: ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿ ಸದಸ್ಯರುಗಳ ಚುನಾವಣೆ) ನಿಯಮಗಳ ಮೇರೆಗೆ ಪುರಸಭಾ, ಪಟ್ಟಣ ಪಂಚಾಯಿತಿ ಮತ ಕ್ಷೇತ್ರದಿಂದ ಜಿಲ್ಲೆಯ ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸಲು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಯೋಜನಾ ಸಮಿತಿಯ ಪದನಿಮಿತ್ತ ಚುನಾವಣಾಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್ ವೇಳಾಪಟ್ಟಿಯನ್ನು ಹೊರಡಿಸಿರುತ್ತಾರೆ.
ಚುನಾವಣೆ ಪ್ರಕ್ರಿಯೆ ವಿವರ
ನವೆಂಬರ್ 10 ರಿಂದ 17 ರವರೆಗೆ ಜಿಲ್ಲಾ ಪಂಚಾಯತ್ ಯೋಜನಾ ವಿಭಾಗದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬೇಕು. ನ.17 ರಂದು ನಾಮಪತ್ರ ಪರಿಶೀಲಿಸುವ ದಿನ. ನ.19 ಉಮೇದಾರಿಕೆಯನ್ನು ಹಿಂತೆಗೆದುಕೊಳ್ಳುವ ದಿನ. ನ.29 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಜಿಲ್ಲಾ ಪಂಚಾಯತ್‍ಯಲ್ಲಿ ಮತದಾನ ಅವಶ್ಯವಿದ್ದರೆ ಮತದಾನ ನಡೆಸಿ ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ಮಾಡಲಾಗುತ್ತದೆ. ಚುನಾಯಿಸಬೇಕಾದ ಸ್ಥಾನ 2, ಪುರಸಭೆ ಸದಸ್ಯರ ಒಟ್ಟು ಸಂಖ್ಯೆ 23 ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



