ದಾವಣಗೆರೆ: ಮೊಬೈಲ್ ಹ್ಯಾಕ್ ಮಾಡಿ ನಗರದ ವ್ಯಾಪಾರಿಯ ಬ್ಯಾಂಕ್ ಖಾತೆಯಿಂದ 8.68 ಲಕ್ಷ ವರ್ಗಾವಣೆ ಮಾಡಿಕೊಂಡು ಸೈಬರ್ ವಂಚನೆ ( Cyber crime) ನಡೆಸಲಾಗಿದೆ. ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಿಕೊಂಡು ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ ಬಿಟಿ ಗಲ್ಲಿಯ ವ್ಯಾಪಾರಿ ವಂಚನೆಗೆ ಒಳಗಾದವರು. ಎನ್.ಆರ್. ರಸ್ತೆಯ ಬ್ಯಾಂಕ್‌ವೊಂದರಲ್ಲಿ ಖಾತೆ ಇದ್ದು, ಅ.22ರಂದು ಈ ಕೃತ್ಯ ಎಸಗಲಾಗಿದೆ. ವ್ಯಾಪಾರಿಯ ಬ್ಯಾಂಕ್ ಖಾತೆಯಲ್ಲಿ ಒಟ್ಟು 8.77 ಲಕ್ಷವಿತ್ತು. ಆದರೆ, ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಕೇವಲ 8,491 ಮಾತ್ರ ಹಣ ಉಳಿದಿದೆ. ಕೂಡಲೇ ಬ್ಯಾಂಕ್ ಸಂಪರ್ಕಿಸಿದಾಗ ಕೃತ್ಯದ ನಡೆದಿರುವುದು ತಿಳಿದುಬಂದಿದೆ.



