ದಾವಣಗೆರೆ: ಕಬ್ಬು ಬೆಳೆಗಾರರು ಕಳೆದ 8 ದಿನಗಳಿಂದ ಹೋರಾಟ ಮಾಡುತ್ತಿದ್ದು, ರೈತರ ಹೋರಾಟ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡದಿರುವುದು ಉದ್ಧಟತನದ ಪರಮಾವಧಿ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕಬ್ಬಿಗೆ ಬೆಂಬಲ ಬೆಲೆ ವಿಚಾರವಾಗಿ ಹಾರಿಕೆ ಉತ್ತರ, ಜಾಣ ಕುರುಡುತನ ಪ್ರದರ್ಶನ ಬೇಡ ಎಂದು ಕಿಡಿಕಾರಿದರು.
ಎಲ್ಲಾದಕ್ಕೂ ಪ್ರಧಾನಿ ಕಡೆ ಬೊಟ್ಟು ತೋರಿಸುತ್ತೀರಿ. ನಿಮಗೇನು ಬೇರೆ ಕೆಲಸ ಇಲ್ವಾ? ಪ್ರಧಾನಿ ಮೋದಿಗೆ ಕರ್ನಾಟಕ ಒಂದೇ ರಾಜ್ಯವೇ..? ಎಲ್ಲದಕ್ಕೂ ಕೇಂದ್ರ ಸರ್ಕಾರ ಕಾರಣ ಎನ್ನುವುದು ನಿಮ್ಮ ತಲೆಯಲ್ಲಿ ಇದ್ದರೆ ನೀವು 2ನೇ ಬಾರಿ ಸಿಎಂ ಆಗಿ ವೇಸ್ಟ್.
ಒಳ್ಳೆಯ ಕೆಲಸ ನಿಮ್ಮದು. ನೀವು ಮಾಡುವ ಕೆಟ್ಟಕೆಲಸಗಳನ್ನು ಕೇಂದ್ರ ಸರ್ಕಾರ ಮೇಲೆ ಹಾಕುತ್ತೀರಾ? ಇಂದಿನ ಸಭೆ ಮುಗಿಸಿ ದೆಹಲಿಗೆ ಬಂದು ಸಾಧಕ- ಬಾಧಕ ಬಗ್ಗೆ ಚರ್ಚೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.



