ದಾವಣಗೆರೆ: ಕೊಂಡಜ್ಜಿ ಬಾರ್ ವೊಂದರ ಮಾಲೀಕ ಕ್ಯಾಶ್ ಬ್ಯಾಗ್ ನೊಂದಿಗೆ ರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದಾಗ ತಡೆದು ಹಲ್ಲೆ, ಬ್ಯಾಗ್ ನಲ್ಲಿದ್ದ ಹಣ ದರೋಡೆ ಮಾಡಿದ್ದ 6 ಜನ ಆರೋಪಿತರನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ರಾತ್ರಿ ವೇಳೆ ಹೊಂಚು ಹಾಕಿ ಅಟ್ಯಾಕ್
ಹರಿಹರ ನಗರದ ವಿಜಯನಗರ ವಾಸಿಯಾದ ಆದಿತ್ಯ ದಿನಾಂಕ:-02-11-2025 ರಾತ್ರಿ 10-00 ಗಂಟೆಯವರೆಗೆ ಕೊಂಡಜ್ಜಿಯಲ್ಲಿರುವ ತಮ್ಮ ಬಾರ್ ಬಂದ್ ಮಾಡಿಕೊಂಡು ಬಾರ್ ನಿಂದ ಸಂಗ್ರಹವಾದ 67,000/- ರೂ ನಗದು ಹಣವನ್ನು ಹಾಗೂ ಬಾರ್ ನ ಕೀಯನ್ನು ಕ್ಯಾಶ್ ಬ್ಯಾಗ್ ನಲ್ಲಿ ತಮ್ಮ ಹೊಂಡಾ ಆಕ್ಟಿವಾ ಬೈಕಿನ ಡಿಕ್ಕಿಯಲ್ಲಿ ಹಣ ಮತ್ತು ಕೀಯನ್ನು ಇಟ್ಟುಕೊಂಡು ಹೋಗುತ್ತಿದ್ದರು.
ಹಲ್ಲೆ ನಡೆಸಿ ಕ್ಯಾಶ್ ಬ್ಯಾಗ್ ದರೋಡೆ
ಪೊಲೀಸ್ ಪಬ್ಲಿಕ್ ಸ್ಕೂಲ್ ಮುಂಭಾಗ ರಾತ್ರಿ 10-10 ಗಂಟೆ ಬರುತ್ತಿದ್ದಂತೆ 02 ಬೈಕ್ ಗಳಲ್ಲಿ 05 ಜನರು ಹಿಂಬಾಲಿಸಿಕೊಂಡು ಬಂದು ಯಾವುದೋ ಒಂದು ಕಬ್ಬಿಣದ ಆಯುಧದಿಂದ ಹಲ್ಲೆ ಮಾಡಿ ಸ್ಕೂಟಿ ಬೈಕಿನ ಡಿಕ್ಕಿಯಲ್ಲಿಟ್ಟಿದ್ದ. ಕ್ಯಾಶ್ ಬ್ಯಾಗ್ ನಲ್ಲಿದ್ದ 67,000/- ರೂಗಳನ್ನು ತೆಗೆದುಕೊಂಡು ಹೋಗಿದ್ದು, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಆರೋಪಿ ಪತ್ತೆ ಕಾರ್ಯದಲ್ಲಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಬಸವರಾಜ.ಬಿ.ಎಸ್ ಮಾರ್ಗದರ್ಶನದಲ್ಲಿ, ಹರಿಹರ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಸ್ ಐ ಯುವರಾಜ ಕಂಬಳಿ (ಕಾ&ಸು), ಮಂಜುಳಾ ಡಿ ಪಿ.ಎಸ್. (ತನಿಖೆ) ಹಾಗೂ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡವು ಕ್ಷಿಪ್ರ ಕಾರ್ಯಚರಣೆ ನಡೆಸಿ ಪ್ರಕರಣ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ವಿವರ
1) ಹನುಮಂತ ತಂದೆ ದೇವೇಂದ್ರಪ್ಪ, 24 ವರ್ಷ, ತರಗಾರ ಕೆಲಸ.ವಾಸ: ಕೊಂಡಜ್ಜಿ ಗ್ರಾಮ, ಹರಿಹರ ತಾಲ್ಲೂಕು
2) ಅಮಿತ್ ತಂದೆ ಶಿವಮೂರ್ತಪ್ಪ 20 ವರ್ಷ, ಕಬ್ಬಿಣ ಕಟ್ಟುವ ಕೆಲಸ, ವಾಸ: ಕೊಂಡಜ್ಜಿ ಗ್ರಾಮ, ಹರಿಹರ ತಾಲ್ಲೂಕು
3) ಅಜಿತ್ ಬಿ. ತಂದೆ ಬಸವರಾಜಪ್ಪ, 24 ವರ್ಷ, ಹಮಾಲಿ ಕೆಲಸ, ವಾಸ: ಬೇತೂರು ರಸ್ತೆ ಇಂದ್ರಾನಗರ ದಾವಣಗೆರೆ
4) ವಿಷ್ಣು ಆರ್. ತಂದೆ ರವಿಕುಮಾರ, 19 ವರ್ಷ, ಬಾರ್ ಬಿಲ್ಡಿಂಗ್ ಕೆಲಸ, ಕೊಂಡಜ್ಜಿ ಗ್ರಾಮ, ಹರಿಹರ ತಾಲ್ಲೂಕು
5) ಕಿರಣ ತಾಯಿ ಚಂದ್ರಮ್ಮ 22 ವರ್ಷ, ಹಮಾಲಿ ಕೆಲಸ, ವಾಸ: ಬೇತೂರು ರಸ್ತೆ ಇಂದ್ರಾನಗರ 02 ನೇ ಕ್ರಾಸ್, ದಾವಣಗೆರೆ
6) ಅಜೇಯ ತಂದೆ ರೇವಪ್ಪ 25 ವರ್ಷ, ವ್ಯವಸಾಯ. ವಾಸ: ಕೊಂಡಜ್ಜಿ ಗ್ರಾಮ, ಹರಿಹರ ತಾಲ್ಲೂಕು
ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ. 30.120/- ರೂ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 1.80.000/- ರೂ ಮೌಲ್ಯದ 02 ಬೈಕ್, 01 ಸ್ಕೂಟ ಹಾಗೂ 20,000/- ರೂ ಮೌಲ್ಯದ 05 ಮೋಬೈಲ್ ಗಳು ಹಾಗು ಅರ್ಧ ಚಂದ್ರಾಕಾರದ ಕಬ್ಬಿಣದ ಹಂಚ್ ನ್ನು ವಶಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ತನಿಖೆ ಮುಂದುವರೆದಿರುತ್ತದೆ. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ತಂಡಕ್ಕೆ ಎಸ್ಪಿ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ



