ದಾವಣಗೆರೆ: ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಯಲ್ಲಿ ಖಾಲಿ ಇರುವ 20 ಪೌರಕಾರ್ಮಿಕರ ಹುದ್ದೆಗಳಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಪೌರಾಡಳಿತ ಇಲಾಖೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ನ.28 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಡಳಿತ ಭವನ ಅಥವಾ ಜಾಲತಾಣ http://davanageredudc.mrc.gov.in
ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್ ತಿಳಿಸಿದ್ದಾರೆ.
ಪ್ರಮುಖ ದಿನಾಂಕ
- ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ 27-10-2025
- ಅರ್ಜಿ ಸಲ್ಲಿಸುವ ಕೊನೆ ದಿನಾಂಕ 28-11-2025
ಎಲ್ಲೆಲ್ಲಿ ಎಷ್ಟು ಹೆದ್ದೆ ಭರ್ತಿ..?
- ಹರಿಹರ ನಗರಸಭೆ 06
- ಚನ್ನಗಿರಿ ಪುರಸಭೆ 03
- ಮಲೇಬೆನ್ನೂರು ಪುರಸಭೆ 03
- ಹೊನ್ನಾಳಿ ಪುರಸಭೆ 03
- ಜಗಳೂರು ಪ.ಪಂ 02
- ನ್ಯಾಮತಿ ಪ.ಪಂ 02
ಅರ್ಹತೆ ಏನು..?
- ವಿದ್ಯಾರ್ಹತೆ ಅನ್ವಯಿಸುವುದಿಲ್ಲ
- ಭಾರತೀಯ ನಾಗರಿಕನಾಗಿರಬೇಕು
- ಕನ್ನಡ ಮಾತನಾಡಲು ಗೊತ್ತಿರಬೇಕು
- 2017ಕ್ಕಿಂತ ಮುನ್ನ ಸ್ಥಳೀಯ ಸಂಸ್ಥೆಗಳಲ್ಲಿ ಪಾವತಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವರು ಮಾತ್ರ ಅರ್ಜಿ ಸಲ್ಲಿಸಬೇಕು
- ಮೀಸಲಾತಿ ಸಬಂಧಿಸಿದಂತೆ ಎಲ್ಲಾ ಪ್ರಮಾಣ ಪತ್ರ ಸಲ್ಲಿಸಬೇಕು.
- ವಯೋಮಿತಿ
18 ವರ್ಷ ಮೇಲ್ಪಟ್ಟಿರಬೇಕು 55 ಒಳಗಿನವರು ಅರ್ಜಿ ಸಲ್ಲಿಸಬಹುದು



