ಬೆಂಗಳೂರು: ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯಭಾರ ಕುಸಿತವಾಗಿದ್ದು, ಇದು ಚಂಡಮಾರುತವಾಗಿ (cyclone) ಪರಿವರ್ತನೆಯಾಗಿದೆ. ಇದರ ಪರಿಣಾಮ ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರ, ತಮಿಳುನಾಡಿನ ಭಾರೀ ಮಳೆ (rain) ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ಚಂಡಮಾರುತಕ್ಕೆ ‘ಮೋಂಥಾ‘ ಎಂದು ಕರೆಯಲಾಗಿದೆ.
ರಾಜ್ಯಕ್ಕೆ ಮೋಂಥಾ ಸೈಕ್ಲೋನ್ ಎಂಟ್ರಿ
ಕಳೆದ ವಾರವಷ್ಟು ವಾಯುಭಾರ ಕುಸಿತದಿಂದ ರಾಜ್ಯದ (Karnataka) ವಿವಿಧ ಕಡೆ ಭಾರೀ ಮಳೆಯಾಗಿ ಅವಾಂತರ ಸೃಷ್ಟಿಯಾಗಿತ್ತು. ಇದೀಗ ಮತ್ತೆ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಮೋಂಥಾ ಎಂಬ ಹೊಸ ಸೈಕ್ಲೋನ್ ರೂಪುಗೊಂಡಿದ್ದು, ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಅ.29ರವರೆಗೆ ಮಳೆ
ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಒಂದು ವಾರದಿಂದ ಧಾರಾಕಾರ ಮಳೆಯಾಗಿದೆ. ‘ಮೋಂಥಾ‘ ಚಂಡಮಾರುತ ಹಿನ್ನೆಲೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುವ ಸೂಚನೆ ಇದೆ. ಈ ಚಂಡಮಾರುತದಿಂದ ಅ.29ರವರೆಗೆ ಮಳೆಯಾಗಲಿದೆ. ಈಶಾನ್ಯ ಮಳೆ ಮಾರುತಗಳು ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿದೆ.



