ದಾವಣಗೆರೆ : ಪ್ರಸಕ್ತ ಸಾಲಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ವೆಬ್‍ಸೈಟ್ http://kmdconline.karnataka.gov.in ಮುಖಾಂತರ ಅಕ್ಟೋಬರ್ 21 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮ(ನಿ), ಕುರುಬರ ಹಾಸ್ಟೇಲ್ ಕಟ್ಟಡ, ಜಯದೇವ ಸರ್ಕಲ್ ಹತ್ತಿರ, ಹದಡಿ ರಸ್ತೆ, ದಾವಣಗೆರೆ-577002.ಮೊ.ಸಂ :8277944215 ಸಂಪರ್ಕಿಸಲು ತಿಳಿಸಲಾಗಿದೆ.
ಹಿರಿಯ ನಾಗರೀಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ
ಅಕ್ಟೋಬರ್ 26 ರಂದು ಬಾಪೂಜಿ ಸ್ಕೂಲ್ ಆವರಣ, ಎಂ.ಸಿ.ಸಿ ಬಿ ಬ್ಲಾಕ್, ದಾವಣಗೆರೆ ಇಲ್ಲಿ ಹಿರಿಯ-ಕಿರಿಯರ ಸಮ್ಮಿಲನ ಕಾರ್ಯಕ್ರಮ ಪ್ರಯುಕ್ತ ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಎಸ್. ಗುರುಮೂರ್ತಿ 6364282359, ಲಕ್ಷ್ಮಿ 7483968224, ತಿಪ್ಪೇಶ್ 9148672498 ಸಂಪರ್ಕಿಸಿಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ|| ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.