ದಾವಣಗೆರೆ: ಜಿಲ್ಲೆಯಲ್ಲಿ ಅಮಲು ಬರುವ ಸಿರಫ್ ಅಕ್ರಮ ಮಾರಾಟ ಜಾಲ (Illegal drug sales) ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ದಾಳಿ ಮಾಡಿ, 1.25 ಲಕ್ಷ ಮೌಲ್ಯದ ಸಿರಫ್ ವಶಕ್ಕೆಪಡೆದು ಐವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಮಾರಾಟ
ಅ.11ರಂದು ರಾತ್ರಿ 9:30ರ ಹೊತ್ತಿಗೆ ಮಾದಕ ದ್ರವ್ಯ ನಿಗ್ರಹ ಪಡೆಯ ವಿಶೇಷ ಕರ್ತವ್ಯಕ್ಕೆ ನೇಮಿಸಿದ ಪಿ.ಎಸ್.ಐ ಸಾಗರ್ ಅತ್ತರವಾಲ್ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಬಸವನಗರ ಠಾಣಾ ವ್ಯಾಪ್ತಿಯ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಕಾನೂನುಬಾಹಿರವಾಗಿ ಯಾವುದೇ ಪರವಾನಗಿ ಇಲ್ಲದೇ ಅಮಲು ಬರುವ ಸಿರಫ್ ಬಾಟಲಿಗಳನ್ನು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಎಸ್ಪಿ ಉಮಾಪ್ರಶಾಂತ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ನಿಗ್ರಹ ಪಡೆಯು ದಾಳಿ ನೆಡೆಸಿದೆ.
ಪರವಾನಗಿ ಇಲ್ಲದೇ ಮಾರಾಟ
ಕಾನೂನುಬಾಹಿರವಾಗಿ ಯಾವುದೇ ಪರವಾನಗಿ ಇಲ್ಲದೇ ಅಮಲು ಬರುವ ಸಿರಫ್ ಬಾಟಲಿಗಳನ್ನು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾಡಲಾಗುತ್ತಿತ್ತು. ವೈಧ್ಯರ ಸಲಹೆ ಇಲ್ಲದೇ, ಯುವ ಸಮೂಹಕ್ಕೆ ಹಾಗೂ ವ್ಯಸನಿಗಳಿಗೆ ಸುಲಭವಾಗಿ ಅಮಲು ಪದಾರ್ಥಗಳ ರೂಪದಲ್ಲಿ ದುರ್ಬಳಕೆಗೆ ಮಾರಾಟ ಮಾಡುತ್ತಿದೆ.
ಬಂಧಿತ ಆರೋಪಿಗಳ ವಿವರ
ಆರೋಪಿಗಳಾದ 1) ಶಿವಕುಮಾರ ತಂದೆ ಈರಪ್ಪ, 38 ವರ್ಷ, ಅಂಗಡಿ ಕೆಲಸ, ವಾಸ: ಎಸ್.ಪಿ ಎಸ್ ನಗರ ದಾವಣಗೆರೆ 2) ಅಜಿಮುದ್ದೀನ್ ತಂದೆ ಗೌಸ್ ಮೈಯಿದ್ದೀನ್, 37 ವರ್ಷ, ಅಂಗಡಿ ಮಾಲೀಕ , ವಾಸ: ಮೆಹಬೂಬ್ ನಗರ ದಾವಣಗೆರೆ 3) ಮಹಮದ್ ಶಾರೀಕ್ ತಂದೆ ಮಹಮದ್ ಅತೀಕ್, 35 ವರ್ಷ, ರಿಯಲ್ ಎಸ್ಟೇಟ್ ಕೆಲಸ ವಾಸ: ದೇವರಾಜ ಅರಸ್ ಬಡಾವಣೆ ಎ ಬ್ಲಾಕ್, ದಾವಣಗೆರೆ, 4) ಸೈಯದ್ ಬಾಬು @ ಯೂನೂಸ್ ತಂದೆ ಸೈಯದ್ ಗಫರ್ ಸಾಬ್, ಅಡಿಕೆ ವ್ಯಾಪಾರ ಮಂಡಲ ಪಂಚಾಯತಿ ಹತ್ತಿರ ಹೊನ್ನೆಬಾಗಿ ಗ್ರಾಮ, ಚನ್ನಗಿರಿ ತಾಲ್ಲೂಕು 5) ಅಬ್ದುಲ್ ಗಫರ್ @ ಆಟೋಬಾಬು ತಂದೆ ಹಸೀನ್ ಷರೀಫ್, 48 ವರ್ಷ,ಆಟೋಚಾಲಕ ವಾಸ ಸೈದಾಮೊಹಲ್ಲಾ, ಚನ್ನಗಿರಿ ಟೌನ್ ಇವರನ್ನು ಬಂಧನ ಮಾಡಲಾಗಿದೆ.
ಏನೆಲ್ಲಾ ವಶಕ್ಕೆ ಪಡೆಯಲಾಗಿದೆ..?
- 100 ಎಂ.ಎಲ್ ನ ಒಟ್ಟು 340 Broncof-C cough Syrup ಬಾಟಲ್ಗಳು
- 100 ಎಂ.ಎಲ್ ನ 15 EDEX-CT cough Syrup ಬಾಟಲ್ಗಳು
- 20 ಸಣ್ಣ ಬಾಕ್ಸ್ ಗಳಲ್ಲಿರುವ aceclofenac Paracetamol & serratiopeptidase tablets
- ಒಂದು ಹೊಂಡಾ ಆಕ್ಟಿವಾ ಬೈಕ್
- 1200 ರೂ, ನಗದುಹಣ
ಒಟ್ಟು ವಶಪಡಿಸಿಕೊಂಡ ಮಾಲಿನ ಬೆಲೆ 1,25,504 ರೂ,ಗಳಾಗುತ್ತದೆ. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ದಾಳಿಯಲ್ಲಿ ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ.ಶರಣಬಸವೇಶ್ವರ ಭೀಮರಾವ್ ಬಿ , ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ.ನಂಜುಂಡಸ್ವಾಮಿ, ಪಿ.ಎಸ್.ಐ ರವರಾದ ಶ್ರೀ.ಸಾಗರ ಅತ್ತರವಾಲ, ಸಿಬ್ಬಂಧಿ ಪ್ರಕಾಶ, ಷಣ್ಮುಖ ಮಂಜುನಾಥ, ಶಿವರಾಜ್, ಗೊವಿಂದರಾಜ್, ಶ್ರೀನಿವಾಸ, ಫಕ್ರುದ್ದೀನ್, ಇಮ್ತಿಯಾಜ್, ಮಂಜುನಾಥ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಅಪರಾಧ ಸ್ಥಳ ಪರಿಶೀಲನೆ ಅಧಿಕಾರಿಗಳಾದ ರಘುನಾಥ, ದೇವರಾಜ ಹಾಗೂ ದರ್ಶನ್ ಪಾಲ್ಗೊಂಡಿದ್ದರು.