ದಾವಣಗೆರೆ: ಜಿಲ್ಲೆಯಲ್ಲಿ ಉದ್ಯಮ ಬೆಳವಣಿಗೆ ಸರ್ಕಾರ, ಉದ್ದಿಮೆದಾರರ ಸಹಕಾರ ಅಗತ್ಯ; ಜಿಲ್ಲಾಧಿಕಾರಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಉದ್ಯಮ ಉಳಿಸಿ ಬೆಳೆಸುವ ಆಶಯವನ್ನು ಕರ್ನಾಟಕ ಕೈಗಾರಿಕೆಗಳ ಸಂಘ ಹೊಂದಿದ್ದು ಇದಕ್ಕೆ ಸರ್ಕಾರ ಮತ್ತು ಉದ್ದಿಮೆದಾರರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದರು.

ನಗರದ ಓಷಿಯನ್ ಪಾರ್ಕ್‍ನಲ್ಲಿ ಕೈಗಾರಿಕೆಗಳ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಝಡ್.ಇ.ಡಿ, ಲೀನ್ ಯೋಜನೆ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

2,3ನೇ ಹಂತದ ನಗರ ಬೆಳೆಸುವ ಅಗತ್ಯವಿದೆ

ಭಾರತ ಅತಿ ಹೆಚ್ಚು ಮಾನವ ಸಂಪನ್ಮೂಲ ಹೊಂದಿದ ದೇಶ ಮತ್ತು ಆರ್ಥಿಕತೆಯಲ್ಲಿಯು ಹೆಚ್ಚು ಬಲಿಷ್ಠವಾವಾಗಿದೆ. ನಮ್ಮಲ್ಲಿ ಬ್ಯಾಂಕಿಂಗ್, ಕೃಷಿ, ಸೇವೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಕೂಡ ಮಾನವ ಸಂಪನ್ಮೂಲ ಬಹಳ ಕಡಿಮೆ ಇದೆ. ಜನಸಂಖ್ಯೆಯ ಮಟ್ಟ ಅತಿ ಹೆಚ್ಚಾಗಿದ್ದರೂ ಕೂಡ ಕಾರ್ಮಿಕರ ಕೊರತೆ ಬಹಳ ಇದೆ, ಏಕೆ ಎಂಬುವುದು ತಮಗೆ ಗೊತ್ತಿದೆ. ಬಹುದೊಡ್ಡ ನಗರಗಳಾದ ಬೆಂಗಳೂರು, ಕೊಲ್ಕತ್ತಾ, ದೆಹಲಿ, ಚನೈ ನಲ್ಲಿ ಜನಸಂಖ್ಯೆ ಮಟ್ಟ ಹೆಚ್ಚಾಗುತ್ತಾ ಇದೆ. ಇದರಿಂದ ಜನಸಾಂದ್ರತೆ ಹೆಚ್ಚಳವಾಗಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕೊಳಚೆ ಪ್ರದೇಶಗಳು ಜಾಸ್ತಿಯಾಗಿರುತ್ತದೆ. ಇದನ್ನು ತಪ್ಪಿಸಲೂ 2 ಮತ್ತು 3ನೇ ಹಂತದ ನಗರಗಳನ್ನು ಬೆಳೆಸುವ ಅಗತ್ಯವಿದೆ ಎಂದರು.

ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಿ

ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಾಗಿ ಅಡಿಕೆ, ತೆಂಗು ಜೊತೆಗೆ, ಭತ್ತ, ಮೆಕ್ಕೆಜೋಳ ಬೆಳೆಯುತ್ತಿದ್ದು ಇಲ್ಲಿಯೂ ಕೂಡ ಕಾರ್ಮಿಕ ಕೊರತೆಯನ್ನು ಕಾಣಲಾಗುತ್ತಿದೆ. ಕಾರ್ಮಿಕರ ಕೊರತೆ ನೀಗಿಸಲು ನಮ್ಮಲ್ಲಿರುವ ತಾಂತ್ರಿಕತೆಯನ್ನು ಇನ್ನೂ ಬಹಳಷ್ಟು ಮುಂದುವರೆಯಬೇಕಾಗಿದೆ. ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು, ಕೃಷಿಯಲ್ಲಿ ಅತಿ ವೇಗವಾಗಿ ಕೆಲಸ ಮಾಡಲು ತಾಂತ್ರಿಕತೆಯನ್ನು ಅಳವಡಿಕೆ ಹೆಚ್ಚಬೇಕಾಗಿದೆ. ಬೇರೆ ದೇಶಗಳಲ್ಲಿ ಕೃಷಿ ತಾಂತ್ರಿಕತೆ ತುಂಬಾ ಮುಂದುವರೆದಿರುವುದರಿಂದ ಆ ದೇಶಗಳು ಬಹಳ ವೇಗವಾಗಿ ಬೆಳೆಯುತ್ತಿದೆ. ಹಳೇಯ ಕೈಗಾರಿಕೆಗಳಲ್ಲಿ ಇನ್ನೂ ಹಳೇಯ ಸಾಮಾಗ್ರಿಗಳನ್ನು ಉಪಯೋಗಿಸುತ್ತಿದ್ದು, ಈಗಲೂ ಕೂಡ ಬದಲಾವಣೆಯಾಗಿರುವುದಿಲ್ಲ. ಅತಿ ವೇಗವಾಗಿ ಕೆಲಸ ಮಾಡುವ ಉಪಕರಣಗಳನ್ನು ಬಳಸುವುದರಿಂದ ಕಡಿಮೆ ಸಮಯ ಹೆಚ್ಚು ಕೆಲಸವಾಗುತ್ತದೆ. ಆಗ ಮಾತ್ರ ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲಾಯನ್ನಾಗಿ ಮಾಡಬಹುದು ಎಂದರು.

ಜಿಲ್ಲಾ ಸಣ್ಣ ಕೈಗಾರಿಕೋದ್ಯಮಗಳ ಸಂಘದ ಅಧ್ಯಕ್ಷರಾದ ಶಂಭುಲಿಂಗಪ್ಪ ಬಸವನಾಳ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಣೇಶ್.ಆರ್, ಉಪಾಧ್ಯಕ್ಷರಾದ ನಿಂಗಣ್ಣ ಎಸ್ ಬಿರಾದರ, ಗ್ರಾಮೀಣ ಜಂಟಿ ಕಾರ್ಯದರ್ಶಿ ದಿನೇಶ್ ಕುಮಾರ್.ವಿ, ಕಾಸಿಯಾ ಪ್ಯಾನಾಲ್ ಅಧ್ಯಕ್ಷರಾದ ಶ್ರೀನಿವಾಸ.ಡಿ.ಸಿ ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *