ದಾವಣಗೆರೆ: ಜೀವನದಲ್ಲಿ ಬೇಸರಗೊಂಡು ನದಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ವಯೋವೃದ್ಧೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಸ್ಥಳೀಯರೊಂದಿಗೆ ರಕ್ಷಣೆ
ಹರಿಹರ ತಾಲೂಕಿನ 87 ವರ್ಷದ ವಯೋ ವೃದ್ಧೆಯೊಬ್ಬರು ಮನೆಯಲ್ಲಿ ಬೇಜಾರಾಗಿ ತುಂಗಭದ್ರಾ ನದಿ ಹತ್ತಿರ ಬಂದು ನದಿಯಲ್ಲಿ ಬೀಳಲು ಹೋಗಿದ್ದರು. ಹೊಳೆ ಹತ್ತಿರ ಇದ್ದ ಅಫ್ತಾಬ್ ಕೂಡಲೇ ಹರಿಹರ ನಗರ ಠಾಣೆ ಮಾಹಿತಿ ನೀಡಿದ್ದು ಎಂ ಕೋಟೇಶ್ವರ ತಕ್ಷಣ ನದಿ ಹತ್ತಿರ ಹೋಗಿ ಸದರಿ ವಯೋವೃದ್ದೆಯನ್ನು ಸ್ಥಳೀಯರೊಂದಿಗೆ ರಕ್ಷಣೆ ಮಾಡಿದ್ದಾರೆ.
ನಂತರ 112 ಗೆ ಕರೆ ಮಾಡಿ, 112 ಕರ್ತವ್ಯ ಅಧಿಕಾರಿಗಳಾದ ಗುತ್ಯಪ್ಪ ಹಾಗೂ ಚಾಲಕ ನಾಗಪ್ಪ ಸಹಾಯದಿಂದ ಸದರಿ ನೊಂದ ವಯೋವೃದ್ಧೆಯನ್ನು ರಕ್ಷಣೆ ಮಾಡಿ ಠಾಣೆಗೆ ಕರೆತಂದು ವಿಳಾಸ ಪತ್ತೆ ಮಾಡಿ ನಂತರ ಮಗ ಶಿವಕುಮಾರ್ ಜೊತೆ ಮನೆಗೆ ಕಳಿಸಿ ಕೊಟ್ಟಿರುತ್ತಾರೆ. ಈ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.