ದಾವಣಗೆರೆ: ಬಂಗಾರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. 10 ಗ್ರಾಂಗೆ ಲಕ್ಷದಾಟಿದ ಚಿನ್ನ ಫ್ರೀಯಾಗಿ ಸಿಕ್ರೇ ಯಾರು ಬೇಡ ಅಂತಾರೇ ಹೇಳಿ. ಮಹಿಳೆಯೊಬ್ಬರು ಜೋಗಮ್ಮನಿಗೆ ಉಡುಗೊರೆ ನೀಡಿದ ಸೀರೆಯಲ್ಲಿ 22 ಗ್ರಾಂ ಚಿನ್ನ ಇಟ್ಟು ಬೀರುವಿನಲ್ಲಿ ಇಟ್ಟಿದ್ದರು. ಅದನ್ನು ಗಮನಿಸಲೇ ಬೀರುವಿನಿಂದ ತೆಗೆದು ಜೋಗಮ್ಮನಿಗೆ ಸೀರೆ ಉಡುಗೊರೆ ಕೊಟ್ಟಿದ್ದಾರೆ. ಜೋಗಮ್ಮ ಚಿನ್ನ ವಾಪಸ್ ನೀಡಲು ನಿರಾಕರಿಸಿದಾಗ ತುರ್ತು ಸಹಾಯವಾಣಿ 112 ಪೊಲೀಸರು ಚಿನ್ನಾಭರಣ ಮರಳಿ ಕೊಡಿಸಿದ್ದಾರೆ.
ಅಕ್ಷತಾ ಎಂಬುವವರ ಮನೆಗೆ 55 ವರ್ಷದ ಜೋಗಮ್ಮ ಬಂದಿದ್ದರು. ಆಗ ಅವರಿಗೆ ಉಪಚರಿಸಿದ ಅಕ್ಷತಾ, ಸೀರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಸೀರೆಯೊಂದಿಗೆ 22 ಗ್ರಾಂ ಚಿನ್ನಾಭರಣವೂ ಇದ್ದುದನ್ನು ಗಮನಿಸದೇ ನೀಡಿದ್ದರು. ಮೂರು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಸೋಮವಾರ ಸಂಜೆ ಬಡಾವಣೆ ಜೋಗಮ್ಮ ಪತ್ತೆಯಾದಾಗ ಅಕ್ಷತಾ, ಜೋಗಮ್ಮನನ್ನು ಪ್ರಶ್ನಿಸಿದ್ದರು. ಜೋಗಮ್ಮ ಅನುಮಾನಾಸದವಾಗಿ ನಡೆದುಕೊಂಡಾಗ ತುರ್ತು ಸಹಾಯವಾಣಿ 112 ಸಂಪರ್ಕಿಸಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಜೋಗಮ್ಮನನ್ನು ವಿಚಾರಿಸಿ ಚಿನ್ನಾಭರಣ ವಾಪಸ್ ಕೊಡಿಸಿದ್ದಾರೆ.



