ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಐತಿಹಾಸಿಕ ಉಚ್ಚಂಗಿದುರ್ಗದ ದೇವಸ್ಥಾನದ ಪಾದಗಟ್ಟೆಯನ್ನು ಇಂದು ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದ್ದು, ದೇವಸ್ಥಾನದ ಪಾದಗಟ್ಟಿ ಊರಿನ ಮುಖ್ಯ ರಸ್ತೆ ಪಕ್ಕದಲ್ಲಿತ್ತು. ಈ ಪಾದಗಟ್ಟೆಯಿಂದ ಹರಪನಹಳ್ಳಿ-ದಾವಣಗೆರೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ಪಾದಗಟ್ಟೆ ತೆರವುಗೊಳಿಸುವಂತೆ ಎಂದು ಸುಪ್ರೀಂ ಆದೇಶ ನೀಡಿತ್ತು.
ಈ ಆದೇಶ ಅನ್ವಯ ಬಳ್ಳಾರಿ ಜಿಲ್ಲಾಧಿಕಾರಳು ಪಾದಗಟ್ಟೆ ತೆರೆವುಗೊಳಿಸಲು ಆದೇಶ ಹೊರಡಿಸಿದ್ದರು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳೇ ಮುಂದೆ ನಿಂತು ಪಾದಗಟ್ಟಿ ತೆರವುಗೊಳಿಸಿದರು. ಪಾದಗಟ್ಟೆ ತೆರವು ಕಾರ್ಯಾಚರಣೆಗೆ ಗ್ರಾಮಸ್ಥರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ.