ದಾವಣಗೆರೆ: ಅಡಿಕೆ ತೋಟದ ಒಂಟಿ ಮನೆಗೆ ಏಕಾಏಕು ನುಗ್ಗಿದ ಐವರು ದರೋಡೆಕೋರರು, ಟಿವಿ ನೋಡುತ್ತಿದ್ದ ದಂಪತಿ ಮೇಲೆ ಹಲ್ಲೆ ನಡೆಸಿ ಕಟ್ಟಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದಲ್ಲದೆ, 8.85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರ ವಲಯದ ತೋಟದ ಮನೆಯಲ್ಲಿ ಮಾದಪ್ಪ ಮತ್ತು ಸಾವಿತ್ರಮ್ಮ ಎಂಬ ದಂಪತಿಗೆ ವಾಸವಿದ್ದರು. ಅವರು ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಏಕಾಏಕಿ ಮನೆಗೆ ಎಂಟ್ರಿ ಕೊಟ್ಟ ಕಳ್ಳರ ಗ್ಯಾಂಗ್, ದಂಪತಿಗಳಿಗೆ ಚಾಕು ತೋರಿಸಿ ಬೆದರಿಸಿ ಕಟ್ಟಿ ಹಾಕಿ ದರೋಡೆ ಮಾಡಿ ಐವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಏನೆಲ್ಲಾ ಕಳ್ಳತನ..?
ಮಾದಪ್ಪ ಪಂಚೆ ಬಿಚ್ಚಿ ಹರಿದು ಕೈ -ಕಾಲು -ಬಾಯಿಗೆ ಕಟ್ಟಿದ್ದಾರೆ. ಒಬ್ಬ ಸಾವಿತ್ರಮ್ಮ ಅವರ ಕಪಾಳಕ್ಕೆ ಹೊಡೆದಿದ್ದಾನೆ. ಕೂಗಿಕೊಂಡಂತೆ ಚಾಕು ತೋರಿಸಿ ಕೈ- ಕಾಲು ಕಟ್ಟಿ ಹಾಕಿದ್ದಾರೆ. ನಂತರ 3 ಲಕ್ಷ ಮೌಲ್ಯದ 30 ಗ್ರಾಂನ ಮಾಂಗಲ್ಯ ಸರ, ಕೈಯಲ್ಲಿದ್ದ 5 ಗ್ರಾಂ ಉಂಗುರ, 4 ಗ್ರಾಂ ಕಿವಿಯಲ್ಲಿ ಓಲೆಯನ್ನು ಕಿತ್ತುಕೊಂಡಿದ್ದಾರೆ. ಬೀರುವಿನ ಬೀಗ ಕೊಡದಿದ್ದಾಗ ಕಪಾಳಕ್ಕೆ ಹೊಡೆದಿದ್ದಾರೆ.
ಬೀರುವನಲ್ಲಿದ್ದ 8 ಗ್ರಾಂ ಸರ, 4 ಗ್ರಾಂನ 2 ಉಂಗುರ, ತಲಾ 4 ಗ್ರಾಂನ 5 ಜೊತೆ ಕಿವಿ ಓಲೆ, ತಲಾ 4 ಗ್ರಾಂ ನ 2 ದೇವರ ಕಿವಿ ಓಲೆ, 2 ದೇವರ ಮೂಗುತಿ ಮತ್ತು ಬೆಳ್ಳಿಯ 2 ದೇವರ ಮುಖಗಳು, 2 ದೀಪಗಳು, 1 ತಟ್ಟೆ 4) ಈಶ್ವರ-ಬಸವಣ್ಣ-2 ಗಣಪತಿ ವಿಗ್ರಹಗಳು 2 ಕರಡಿಗೆ, 2 ಕಾಲು ಉಂಗುರಗಳನ್ನು ಬೆಳ್ಳಿಯ ಸಾಮಾನು ತೆಗೆದುಕೊಂಡು ಬೀರುವಿನಲ್ಲಿದ್ದ ಪತ್ರಗಳನ್ನು ನೋಡಿ ತೆಗೆದು ಹೊಸಾಕಿ ಇಬ್ಬರನ್ನು ರೂಮಿನಲ್ಲಿ ಕೂಡಿ ಹಾಕಿ ಹೋಗಿದ್ದಾರೆ.
ಸ್ವಲ್ಪ ಸಮಯದ ನಂತರ ಮನೆಗೆ ಬಂದ ಮಾದಪ್ಪ ಅವರ ಮಗ ವಿಕಾಸ, ಅಳಿಯ ಸಂತೋಷ ಬಂದು ರೂಮಿನ ಬಾಗಿಲು ತೆಗೆದರು. ಸಾವಿತ್ರಮ್ಮ ನಡೆದ ಎಲ್ಲ ವಿಚಾರ ಹೇಳಿದ್ದಾರೆ. ಆಗ ಇಬ್ಬರು ಸುತ್ತ ಮುತ್ತ ತೋಟದಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಪ್ರಕರಣ ದಾಖಲಿಸಿಕೊಂಡ ಸಂತೆಬೆನ್ನೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.ದರೋಡೆ ಮಾಡಿರುವ ಎಲ್ಲರೂ ಕನ್ನಡ ಮಾತನಾಡುತ್ತಿದ್ದರು. ದಪ್ಪ ಮೈಕಟ್ಟು ಹೊಂದಿದ್ದರು ಎಂದು ಸಾವಿತ್ರಮ್ಮ ತಿಳಿಸಿದ್ದಾರೆ.
ದರೋಡೆ ಪ್ರಕರಣ ಘಟನಾ ಸ್ಥಳಕ್ಕೆ ಎಸ್ಪಿ ಬೇಟಿ ಪರಿಶೀಲನೆ
ರ ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿತರ ಪತ್ತೆಗಾಗಿ ತನಿಖಾಧಿಕಾರಿಗಳಿಗೆ ಸೂಕ್ತ ತನಿಖಾ ಸೂಚನೆಗಳನ್ನು ನೀಡಿದರು. ಈ ಸಂಧರ್ಭದಲ್ಲಿಎಎಸ್ಪಿ ಪರಮೇಶ್ವರ ಹೆಗಡೆ , ಡಿವೈಎಸ್ಪಿ ಸ್ಯಾಮ್ ವರ್ಗೀಸ್ , ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ಸೇರಿದಂತೆ ಸುಕೋ ಅಧಿಕಾರಿಗಳ ತಂಡ, ಶ್ವಾನ ದಳ, ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಉಪಸ್ಥಿತರಿದ್ದರು.



