Connect with us

Dvgsuddi Kannada | online news portal | Kannada news online

ಕೆರೆಬಿಳಚಿ ಸರ್ಕಾರಿ ಮಾದರಿ ಶಾಲೆಯಲ್ಲಿ ವಿಜ್ಞಾನ ಮೇಳ

ದಾವಣಗೆರೆ

ಕೆರೆಬಿಳಚಿ ಸರ್ಕಾರಿ ಮಾದರಿ ಶಾಲೆಯಲ್ಲಿ ವಿಜ್ಞಾನ ಮೇಳ

ಡಿವಿಜಿ ಸುದ್ದಿ,  ಚನ್ನಗಿರಿ:  ರಾಜ್ಯದ ಮಾದರಿ ಶಾಲೆ ಹಾಗೂ ಕಂಪ್ಯೂಟರೈಸ್ಡ್ ಕಲಿಕಾ ಕೇಂದ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವ ತಾಲ್ಲೂಕಿನ  ಕೆರೆಬಿಳಚಿಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಇಂದು “ವಿಜ್ಞಾನ ಮೇಳ” ನಡೆಯಿತು.

govt school 2

ವಿದ್ಯಾರ್ಥಿಗಳು ಕಸದಿಂದ ರಸ ಎನ್ನುವಂತೆ ಅನುಪಯುಕ್ತ ವಸ್ತುಗಳನ್ನು ಉಪಯೋಗಿಸಿ  ವಾಯುಮಾಲಿನ್ಯ,  ಶಬ್ದ ಮಾಲಿನ್ಯ,  ಪವನ ಯಂತ್ರಗಳು,  ಮೋಟಾರ್ ಬೋಟ್, ರೈಲ್ವೆ ನಿಲ್ದಾಣ, ಜೆ ಸಿ ಬಿ  ಯಂತ್ರ,  ಕಲಾಕೃತಿಗಳು, ಹೀಗೆ ವಿಭಿನ್ನ  ಬಗೆಯ ಕಲಾ ಅದ್ಭುತಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.

govt school 3

ಪ್ರತಿಯೊಂದು ಕಲಾಕೃತಿಯ ಬಗ್ಗೆ  ವಿದ್ಯಾರ್ಥಿಗಳ ವಿವರಣೆ ವಿಶಿಷ್ಟವಾಗಿತ್ತು. ಮೇಳದಲ್ಲಿ ಎಸ್. ಡಿ ಎಂ ಸಿ  ಅಧ್ಯಕ್ಷೆ ಮಾಸೂಮ್ ಜಾನ್, ಅಸ್ಲಮ್ ಶೇಖ್  ಮುಖ್ಯೋಪಾಧ್ಯಾಯ  ಕೋಮಲಾಕ್ಷಿ, ಹಾಗೂ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top