ದಾವಣಗೆರೆ: 2006-07ನೇ ಸಾಲಿನ ಭಾಗ್ಯಲಕ್ಷ್ಮೀ ಬಾಂಡ್ ಪಡೆದ ಫಲಾನುಭವಿಗಳಿಂದ ಪರಿಪಕ್ವ ಮೊತ್ತ ಪಾವತಿಗೆ ನೋಂದಾಯಿಸಲು ಅಕ್ಟೋಬರ್ 31ರವರೆಗೆ ಕಲಾವಕಾಶವನ್ನು ನೀಡಲಾಗಿದೆ.
ಫಲಾನುಭವಿಗಳು ತಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ನಂದಗೋಕುಲ ಬಿಲ್ಟಿಂಗ್, ದುಗಾರ್ಂಬಿಕಾ ಶಾಲೆ ಎದುರು ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕೆಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.



