ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಕ್ರಾಸ್ ನ ಯಲವಟ್ಟಿ ರಸ್ತೆಯ ಅಡಿಕೆ ತೋಟದಲ್ಲಿ ಬೀಡುಬಿಟ್ಟಿದ್ದ ಕುರಿ ಹಿಂಡಿನ ಮೇಲೆ ತಡರಾತ್ರಿ ಚಿರತೆ ದಾಳಿ ನಡೆಸಿದ್ದು, 27 ಕುರಿ ಮೃ*ತಪಟ್ಟಿವೆ.
ಬೆಳಗಾವಿ ಜಿಲ್ಲೆಯ ಸದಲಗ ಗ್ರಾಮದ ಸೋಮಣ್ಣಗೆ ಸೇರಿದ ಕುರಿಗಳಾಗಿವೆ. ಕುರಿ ಹಿಂಡಿನ ಮೇಲೆ ಏಕಾಏಕಿ ಚಿರತೆ ರಾತ್ರಿ ದಾಳಿ ನಡೆಸಿದೆ. ಕುರಿಗಳು ಎಲ್ಲೆಂದರಲ್ಲಿ ಸತ್ತು ಬಿದ್ದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಪತ್ತೆಗೆ ಮುಂದಾಗಿದ್ದಾರೆ.



