ದಾವಣಗೆರೆ: ಅಕ್ರಮವಾಗಿ ಗಾಂಜಾ ಸೊಪ್ಪು ಸಂಗ್ರಹ ಮೇಲೆ ಪೊಲೀಸರು ದಾಳಿ ಮಾಡಿದ್ದು, 2 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದು ಆರೋಪಿಗಳ ಬಂಧನ ಮಾಡಿದ್ದಾರೆ.
ಮಾದಕ ದ್ರವ್ಯ ನಿಗ್ರಹ ಪಡೆಯ ಪಿಎಸ್ ಐ ಸಾಗರ್ ಅತ್ತರ್ ವಾಲ್ ಹರಿಹರ ನಗರದ ಜೋಡು ಬಸವೇಶ್ವರ ದೇವಾಸ್ಥಾನದ ಹತ್ತಿರ ಖಾಲಿ ಜಾಗದಲ್ಲಿ ಯಾರೋ ಎರಡು ಜನ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುವ ಉದ್ದೇಶಕ್ಕಾಗಿ ಸಂಗ್ರಹಿಸಿಟ್ಟುಕೊಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಹರಿಹರ ಜೋಡು ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಮಧ್ಯಾಹ್ನ ಸಮಯದಲ್ಲಿ ದಾಳಿ ನಡೆದಿದೆ. ಆರೋಪಿಗಳಾದ ಮೌಸಿನ್ ಖಾನ್ (53), ಸೈಯ್ಯದ್ ಫತೇ ಅಹಮದ್ ತಂದೆ ( 23) ವಶಕ್ಕೆ ಪಡೆದುಬಟ್ಟೆ ಚೀಲದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ 2,00,000/-ರೂ ಬೆಲೆಯ 1150 ಗ್ರಾಂ ಗಾಂಜಾ ಸೊಪ್ಪು, ಒಂದು ಹೊಂಡಾ ಆಕ್ಟಿವಾ ಸ್ಕೂಟರ್, ಒಂದು ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿರುತ್ತದೆ. ಕಾರ್ಯಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಸಂಶಿಸಿದ್ದಾರೆ.



