ದಾವಣಗೆರೆ: ಕಾರ್ಗಿಲ್ ವಿಜಯ ದಿವಸ್ ; ಮಾಜಿ ಸೈನಿಕರಿಗೆ ಸನ್ಮಾನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಭಾರತೀಯ ಜನತಾ ಪಾರ್ಟಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಗರದ ಕಾಯಿ ಪೇಟೆ ಬಸವೇಶ್ವರ ದೇವಸ್ಥಾನ ಹತ್ತಿರ ಕಾರ್ಗಿಲ್ ವಿಜಯ ದಿವಸ್ (kargil vijay diwas)  ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಾಜಿ ಸೈನಿಕರಾದ ಮೇಜರ್ ಸುಬೇದಾರ ಚಂದ್ರಪ್ಪ ಕೆ ಬಿ.ಬಸವರಾಜ್, ಸುರೇಶ್ ರಾವ್,ರವಿಚಂದ್ರ, ವೀರಪ್ಪ ಕೆ‌ ಅವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧ ನಡೆದಿತ್ತು. ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಅಮೆರಿಕದ ಅಧ್ಯಕ್ಷ ತಡರಾತ್ರಿ ಅಟಲ್ ಜೀ ಅವರಿಗೆ ಕರೆ ಮಾಡಿ ಪಾಕ್ ಮೇಲೆ ಯುದ್ಧ ನಿಲ್ಲಿಸದಿದ್ದರೆ ಪರಮಾಣು ದಾಳಿ ಮಾಡುವುದಾಗಿ ಹೇಳುತ್ತಿದ. ಅಟಲ್ ಜೀ ಅವರು ಕಾಶ್ಮೀರದ ಒಂದು ಭಾಗ ನಾಶವಾಯಿತು ಎಂದು ತಿಳಿದುಕೊಳ್ಳುವೆ. ಆದರೆ ಬೆಳಗಾಗುವುದರೊಳಗೆ ವಿಶ್ವ ಭೂಪಟದಲ್ಲಿ ಪಾಕಿಸ್ತಾನ ಇರುವುದಿಲ್ಲ ಎಂದು ದಿಟ್ಟತನವನ್ನು ಪ್ರದರ್ಶಿಸಿದ್ದರು ಎಂದು ಮಾತನಾಡಿದರು.

ಮಾಜಿ ಸೈನಿಕರಾದ ಚಂದ್ರಪ್ಪ ಸುಬೇದಾರ್ ಮಾತನಾಡಿ, ಸೇವೆಯಲ್ಲಿ ಇದ್ದ ಸಂದರ್ಭದಲ್ಲಿ ಅನೇಕ ಅನುಭವಗಳನ್ನು ಹಚ್ಚಿಕೊಂಡು ಸೈನಿಕರ ಈ ತ್ಯಾಗಕ್ಕೆ ಬೆಲೆ ಕೊಟ್ಟು ಪ್ರಧಾನಿ ಮೋದಿ ಅವರು ಪ್ರತಿ ವರ್ಷ ಸೈನಿಕರ ಜೊತೆ ಪ್ರತಿ ಹಬ್ಬವನ್ನು ಆಚರಿಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಸೈನಿಕರ ಆತ್ಮಸ್ವಸ್ಥೈರ್ಯವನ್ನು ತುಂಬುವಂಥ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ ಇಂಥ ಪ್ರಧಾನಿ ಜೊತೆ ದೇಶದ ಜನತೆ ಸದಾ ಬೆಂಬಲವಾಗಿ ನಿಲ್ಲಬೇಕೆಂದು ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ ರಮೇಶ್ ನಾಯಕ್, ಲೀಗಲ್ ಸೆಲ್ ಸಂಚಾಲಕರಾದ ಎಸಿ ರಾಘವೇಂದ್ರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ ಪಾಟೀಲ್, ಸ್ಮಾರ್ಟ್ ಸಿಟಿ ಮಾಜಿ ನಿರ್ದೇಶಕರಾದ ಎಸ್ ಬಾಬು, ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಎಸ್ ಬಾಲಚಂದ್ರ ಶೆಟ್ಟಿ, ಶಿವಾನಂದ್, ಮಾಜಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಟಿಂಕರ್ ಮಂಜಣ್ಣ, ಕಿಶೋರ್ ಕುಮಾರ್, ಮಾಜಿ ಆಶ್ರಯ ಸಮಿತಿ ಸದಸ್ಯರಾದ ಆನಂದ ಹಿರೇಮಠ, ದುರುಗೇಶ್, ಆನೆಕೊಂಡ ಪುಟ್ಟಣ್ಣ, ಗುರು ಸೋಗಿ,ಹರೀಶ್ ಹೊನ್ನುರ್, ರವಿಕುಮಾರ್, ಕೆ.ಎಂ.ಬಸವರಾಜ, ಹನುಮಂತಪ್ಪ, ನಾಗರಾಜ್ , ಗ್ಯಾಸ್ ಕುಮಾರಣ್ಣ, ಗಾಂಧಿನಗರದ ಹನುಮಂತಪ್ಪ, ಹನುಮಂತಪ್ಪ ಪೈ, ರಾಕೇಶ್ ಜಾಧವ್, ಮಹಿಳಾ ಮೊರ್ಚಾದ ಪ್ರದಾನ ಕಾರ್ಯದರ್ಶಿಗಳಾದ ಭಾಗ್ಯ ಪಿಸಾಳೆ, ಚೇತನ ಕುಮಾರ್, ರೇಣುಕಾ ಕೃಷ್ಣ,ಲೀಲಮ್ಮ ,ಮಂಜುಳಾ ಇಟಿಗಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಸುತ್ತು ಮುತ್ತಲಿನ ವರ್ತಕರು ಭಾಗಿಯಾಗಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *