ದಾವಣಗೆರೆ: ಜಿಲ್ಲೆಯಲ್ಲಿ ಖೋಟಾ ನೋಟು ಜಾಲ ಪತ್ತೆಯಾಗಿದ್ದು 500, 200 ಮುಖಬೆಲೆಯ ಚಲಾವಣೆ ನಡೆಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಎಷ್ಟು ಮುಖಬೆಲೆಯ ಖೋಟಾ ನೋಟು ಪತ್ತೆ..?
ದಾವಣಗೆರೆ ತಾಲ್ಲೂಕಿನ ಕುಕ್ಕವಾಡ ಗ್ರಾಮದ ಕುಬೇರಪ್ಪ, ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಡುವಿನ ತಾಂಡಾ ನಿವಾಸಿ ಸಂತೋಷಕುಮಾರ, ಕೊಟ್ಟೂರು ತಾಲ್ಲೂಕಿನ ಬೇವೂರು ಗ್ರಾಮದ ನಿವಾಸಿಗಳಾದ ವೀರೇಶ ಬಿ.ಪಿ., ಹನುಮಂತಪ್ಪ ಬಂಧಿತರು. ಬಂಧಿತರಿಂದ ಒಟ್ಟು 3,75,400 ಮೌಲ್ಯ ಮುಖ ಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.



