ದಾವಣಗೆರೆ: ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಮಹಿಳಾ ಕಳ್ಳಿಯರು ಬಂಧನ ಮಾಡಲಾಗಿತ್ತು. ಇದೀಗ ಬ್ಯಾಂಕ್ ಗೆ ಹಣ ಕಟ್ಟಲು ಸರದಿ ಸಾಲಿನಲ್ಲಿ ನಿಂತಿದ್ದ ಮಹಿಳೆ ಬ್ಯಾಗ್ ಕತ್ತರಿಸಿದ ಕಳ್ಳಿಯರ ಗ್ಯಾಂಗ್, 1 ಲಕ್ಷ ಹಣ ದೋಚಿ ಪರಾರಿಯಾದ ಘಟನೆ ನಡೆದಿದೆ.
ದಾವಣಗೆರೆ: ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮಹಿಳಾ ಆರೋಪಿಗಳ ಬಂಧನ; 15 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಹಣವಿದ್ದ ಬ್ಯಾಗ್ ಗೆ ಬ್ಲೇಡ್
ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸತೇಬೆನ್ನೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಣ ಪಾವತಿಸಲು ಕೌಂಟರ್ ಬಳಿಯೇ ನಡೆದಿದೆ. ಚನ್ನಗಿರಿ ತಾಲ್ಲೂಕಿನ ತಣಿಗೆರೆ ಗ್ರಾಮದ ಮಹಿಳೆ ಲತಾ ಚಿನ್ನದ ಸಾಲ ಮರು ನವೀಕರಣ ಮಾಡಲು 3.5 ಲಕ್ಷ ಹಣ ಬ್ಯಾಗ್ನಲ್ಲಿ ಇಟ್ಟುಕೊಂಡು ಬಂದಿದ್ದರು. ಅಲ್ಲೇ ಇದ್ದ ಲೇಡಿ ಗ್ಯಾಂಗ್, ಇದನ್ನು ಸೂಕ್ಷ್ಮವಾಗಿ ಗಮನಿಸಿದ ಹಣವಿದ್ದ ಬ್ಯಾಗ್ ಬ್ಲೇಡ್ ನಿಂದ ಕೊಯ್ದಿದ್ದಾರೆ. ಬ್ಯಾಂಗ್ ನಲ್ಪಿದ ಎರಡು ಕಂತೆಯ 1 ಲಕ್ಷ ಹಣ ಕದ್ದಿದ್ದಾರೆ.
ಒಬ್ಬ ಕಳ್ಳಿ ಹಣ ಸಮೇತ ಪರಾರಿ
ಹಣ ಬ್ಯಾಗ್ ಭಾರ ಕಡಿಮೆಯಾದ ಹಣ ಕಟ್ಟಲು ಬಂದ ಲತಾ ಬ್ಯಾಗ್ ನೋಡಿಕೊಂಡಿದ್ದಾರೆ. ಹಣ ಇಲ್ಲದಿರುವುದು ಗೊತ್ತಾಗಿದೆ. ಹಣ ಇಲ್ಲ ಎಂದಾಕ್ಷಣ, ಅಲ್ಲೇ ಇದ್ದ ಇಬ್ಬರು ಮಹಿಳೆಯರನ್ನು ಸ್ಥಳೀಯರು ಹಿಡಿದಿದ್ದಾರೆ. ಇನ್ನೊಬ್ಬ ಮಹಿಳೆ ಹಣ ತೆಗೆದುಕೊಂಡು ಪರಾರಿಯಾಗಿದ್ದು, ಇಬ್ಬರು ಮಹಿಳೆಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಧ್ಯ ಪ್ರದೇಶ ಮೂಲದವ ಆರೋಪಿಗಳು
ಸಿಕ್ಕ ಇಬ್ಬರೂ ಮಧ್ಯ ಪ್ರದೇಶದ ಮೂಲದವರು. ಆರೋಪಿಗಳ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಹಣದೊಂದಿಗೆ ಪರಾರಿಯಾದ ಮಹಿಳೆಗಾಗಿ ಶೋಧ ನಡೆಯುತ್ತಿದೆ. ಈ ಬಗ್ಗೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



