ದಾವಣಗೆರೆ: ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿಒ) ಹೆಸರಲ್ಲಿ ವಾಟ್ಸಾಪ್‌ಗೆ ಇ-ಚಲನ್ ಸಂದೇಶ ಕಳುಹಿಸುವ ಸೈಬರ್ ಕ್ರೈಂ (cyber crime), ವಂಚಕರು, ಜನರ ಹಣ ದೋಚಲು ಹೊಸ ಫ್ಲ್ಯಾನ್ ಗೆ ಮುಂದಾಗಿದ್ದಾರೆ. ಸಾರ್ವಜನಿಕರು ಇಂತಹ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಆರ್‌ಟಿಒ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಾಟ್ಸಾಪ್ ಸಂದೇಶದಲ್ಲಿ ನೀವು ಸಂಚಾರ ನಿಯಮ ಉಲ್ಲಂಘಿಸಿದ್ದೀರಿ, ನಿಮ್ಮ ಇ-ಚಲನ್ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಆರ್‌ಟಿಒ ಅಧಿಕಾರಿಯನ್ನು ಸಂಪರ್ಕಿಸಿ ಎಂದು ಸೈಬರ್ ತಮ್ಮ ನಂಬರ್ ಹಾಕಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳಬೇಡಿ
ನೀವು ಅಪ್ಪಿತಪ್ಪಿಯು ಆ ನಂಬರ್‌ಗೆ ಕರೆ ಮಾಡಿದರೆ, ಆಗ ನೀವು ಸಾರಿಗೆ ನಿಯಮ ಉಲ್ಲಂಘಿಸಿದ್ದೀರಿ.., ನಿಮ್ಮ ಚಲನ್ ವಾಟ್ಸಾಪ್ ಮೂಲಕ ಒಂದು ಲಿಂಕ್ ಕಳುಹಿಸುತ್ತಾರೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ಮಾಯವಾಗಬಹುದು.ಈ ಮೂಲಕ ವಂಚಕರು, ಆರ್‌ಟಿಒ ಹೆಸರಲ್ಲಿ ವಂಚನೆಗೆ ಇಳಿದಿದ್ದಾರೆ. ಒಮ್ಮೆ ವಂಚಕರು ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕಿಂಗ್ ವಿವರಗಳು, ಒಟಿಪಿಗಳು ಮತ್ತು ಇತರ ವೈಯಕ್ತಿಕ ಮಾಹಿತಿ ಅವರಿಗೆ ಲಭ್ಯವಾಗಲಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಆರ್ ಟಿಒ ಇಲಾಖೆ ಸೂಚನೆ ನೀಡಿದೆ.
ಈ ರೀತಿಯ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು
ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಸಾರ್ವಜನಿಕರಿಗೆ ಈ ರೀತಿಯಾಗಿ ಯಾವುದೇ ಚಲನ್ ಕಳುಹಿಸುವುದಿಲ್ಲ. ಸಾರ್ವಜನಿಕರು ಈ ರೀತಿಯ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು ಎಂದು ಆರ್‌ಟಿಒ ಹೆಚ್.ಎಸ್. ಭಗವಾನ್ ದಾಸ್ ಮನವಿ ಮಾಡಿದ್ದಾರೆ. ಯಾವುದೇ ವಂಚನೆಯ ಸಂದೇಶ ನಿಮಗೆ ಬಂದರೆ, ತಕ್ಷಣ ಹತ್ತಿರದ ಸೈಬರ್ ಕ್ರೈಂ ಠಾಣೆಗೆ ಮಾಹಿತಿ ನೀಡಿ ಎಂದು ತಿಳಿಸಿದ್ದಾರೆ.



