ದಾವಣಗೆರೆ: ಮ್ಯಾರೇಜ್ ಆ್ಯಪ್ ನಲ್ಲಿ ಪರಿಚಯವಾದ ಯುವತಿ ಮಾತು ನಂಬಿದ ದಾವಣಗೆರೆ ಟಿಕ್ಕಿಯೊಬ್ಬರು ಬರೋಬ್ಬರಿ 9.34 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.
ಸಂಗಮ ಮ್ಯಾರೇಜ್ ಆ್ಯಪ್ ನಲ್ಲಿ ಖಾತೆ ತೆರೆದ್ದಿ ಟೆಕ್ಕಿ. ಏಪ್ರಿಲ್ 24 ರಂದು ‘ಅಭಿನಯ’ ಎಂಬ ಹೆಸರಿನ ಪ್ರೊಫೈಲ್ ಹೊಂದಿದ ಯುವತಿಯೊಬ್ಬರಿಂದ ವಾಟ್ಸಾಪ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾಳೆ. ನಿಮ್ಮ ಪ್ರೊಫೈಲ್ ಇಷ್ಟವಾದ್ದು, ನಾನು ನಿಮ್ಮನ್ನು ಮದುವೆ ಮಾಡಿಕೊಳ್ಳಲು ಒಪ್ಪಿಗೆ ಇದೆ. ನಾನು ತಮಿಳುನಾಡಿನ ಚೆನ್ನೈ ಮೂಲದವಳಾಗಿದ್ದು, ಮಲೇಷಿಯಾದಲ್ಲಿ ನೆಲೆಸಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ.
ಲಾಭದ ಆಸೆಗೆ ಬಿದ್ದು ಹಣ ಕಳೆದುಕೊಂಡ
ಪರಿಚಯ ನಂತರ, ಯುವತಿ ತಾನು Global TRX ಎಂಬ ಕ್ರಿಪ್ಟೋ ಕರೆನ್ಸಿಗೆ ಹೂಡಿಕೆ ಮಾಡಿದ್ದೇನೆ. ನಿಮಗೂ ಆಸಕ್ತಿಯಿದ್ದರೆ ಹೂಡಿಕೆ ಮಾಡಿ ಲಾಭ ಗಳಿಸಿ ಎಂದು ಒಂದು ಲಿಂಕ್ ಅನ್ನು ಕಳುಹಿಸುತ್ತಾಳೆ. ಆಕೆಯ ಮಾತು ನಂಬಿದ ಟೆಕ್ಕಿ, ಮಹಿಳೆ ಕಳುಹಿಸಿದ ಲಿಂಕ್ ಮೂಲಕ ಮೇ 4 ರಿಂದ 9ರ ನಡುವೆ ವಿವಿಧ ಹಂತ ಹಂತವಾಗಿ ರೂ. 9.34 ಲಕ್ಷ ಹಣ ವರ್ಗಾಯಿಸಿದ್ದಾರೆ.
ಹಣ ಹೂಡಿದ ಬಳಿಕ, ಮತ್ತೆ ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕೆಂದು ಯುವತಿಯಿಂದ ಮತ್ತೊಂದು ಅಪರಿಚಿತ ನಂಬರ್‌ನಿಂದ ಕರೆ ಬರುತ್ತದೆ. ಶೇಕಡಾ 5 ರಷ್ಟು ಫೀ ಪಾವತಿಸಿದರೂ ಮತ್ತೆ ಯುಎಸ್ ಡಾಲರ್‌ನಿಂದ ಭಾರತೀಯ ರೂಪಾಯಿಗೆ ಪರಿವರ್ತನೆಗೆ ಹಣ ಕೇಳಿದಾಗ ವಂಚನೆ ನಡೆದಿರುವುದು ಗೊತ್ತಾಗುತ್ತದೆ. ತಕ್ಷಣವೇ ದಾವಣಗೆರೆ ಸೈಬರ್, ಎಕಾನಾಮಿಕ್ ಕ್ರೈಂ ಮತ್ತು ನಾರ್ಕೋಟಿಕ್ಸ್ (CEN) ಠಾಣೆಯಲ್ಲಿ ದೂರು ದಾಖಲಾಗಿದೆ.



