ದಾವಣಗೆರೆ: ನಾವೇ ಒರಿಜಿನಲ್ ಬಿಜೆಪಿಗರು. ನಾನೇನು ಕೆಜೆಪಿ, ಬ್ರಿಗೇಡ್ ಕಟ್ಟಿಲ್ಲ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಟಾಂಗ್ ನೀಡಿದರು.
ನಾನು ಸತ್ತ ಮೇಲೆ ಗೊಂದಲ ಬಗೆಹರಿಯಲಿದೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಬಣ ಇಲ್ಲ. ಐ ಆಮ್ ಪ್ಯೂರ್ ಬಿಜೆಪಿ. ಪ್ರಸ್ತುತ ಜಿಲ್ಲಾ ಬಿಜೆಪಿಯ ಗೊಂದಲ ನಾನು ಸತ್ತ ಮೇಲೆ ಸರಿ ಹೋಗಬಹುದು ಎಂದರು.
ಶಿವಗಂಗಾ ಆರೋಪಕ್ಕೂ ನನಗೂ ಸಂಬಂಧವಿಲ್ಲ
ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹಣ ಪಡೆದು ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆಂಬ ಶಾಸಕ ಬಸವರಾಜ ಶಿವಗಂಗಾ ಅವರ ಆರೋಪಕ್ಕೆ ರಾಜ್ಯಾಧ್ಯಕ್ಷರು ಏನು ಕ್ರಮ ಕೈಗೊಳ್ಳುವರು ನೋಡಬೇಕು. ಶಿವಗಂಗಾ ಆರೋಪಕ್ಕೂ ನನಗೂ ಸಂಬಂಧವಿಲ್ಲ. ಅವರು ನನ್ನ ಸಂಪರ್ಕದಲ್ಲೂ ಇಲ್ಲ ಎಂದು ತಿಳಿಸಿದರು.



