ಹರಿಹರ: ತಾಲ್ಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ಕಂದಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಪೌತಿ ಖಾತೆ (ಮರಣ ಹೊಂದಿದವರ ಹೆಸರಿನಲ್ಲಿದ್ದ ಜಮೀನಿನ ಖಾತೆ ಬದಲಾವಣೆ) ಆಂದೋಲನಕ್ಕೆ ಶಾಸಕ ಬಿ.ಪಿ.ಹರೀಶ್ ಚಾಲನೆ ನೀಡಿದರು.
10 ದಿನದೊಳಗೆ ಪೌತಿ ಖಾತೆ
ಹರಿಹರ ತಾಲ್ಲೂಕಿನಲ್ಲೇ 4272 ಪೌತಿ ಖಾತೆಗಳಿದ್ದು, ಈ ಪೌತಿ ಖಾತೆ ಆಂದೋಲನ ರೈತರಿಗೆ ಬಹಳ ಅನುಕೂಲವಾಗಲಿದೆ. ಅರ್ಜಿ ಸಲ್ಲಿಸಿದ ಪೌತಿ ಖಾತೆಯ ವಾರಸುದಾರರಿಗೆ 10 ದಿನದೊಳಗೆ ಖಾತೆ ಆಗಲಿದೆ ಎಂದರು.
ಗ್ರಾಮ ಠಾಣಾ ವ್ಯಾಪ್ತಿಗೂ ವಿಸ್ತರಿಸಿ
ಹಳ್ಳಿಗಳಲ್ಲಿ ಬಹಳಷ್ಟು ಜನ ಊರ ಹೊರಗಿರುವ ತಮ್ಮ ಕಣ ಅಥವಾ ಗದ್ದೆ, ತೋಟಗಳಲ್ಲಿ ಮನೆ ಕಟ್ಟುತ್ತಿದ್ದಾರೆ. ಅಲ್ಲದೇ, ಸರ್ಕಾರದ ಜನತಾ, ಆಶ್ರಯ ಮನೆಕಟ್ಟಲು ಇ-ಸ್ವತ್ತು ಕೇಳುತ್ತಿದ್ದಾರೆ. ಹೀಗಾಗಿ ಪೌತಿ ಖಾತೆ ಆಂದೋಲನವನ್ನು ಗ್ರಾಮ ಠಾಣಾ ವ್ಯಾಪ್ತಿಗೂ ವಿಸ್ತರಣೆ ಮಾಡುವ ತೀರ್ಮಾನವನ್ನು ರಾಜ್ಯ ಸರ್ಕಾರ ತಕ್ಷಣ ತೆಗೆದುಕೊಳ್ಳಬೃಕು ಎಂದರು.
ತಹಶೀಲ್ದಾರ್ ಗುರುಬಸವರಾಜ್ ಮಾತನಾಡಿ, ಕಂದಾಯ ಸಚಿವರು ತುಂಬಾ ಆಸಕ್ತಿ ವಹಿಸಿ, ಈ ಪೌತಿ ಖಾತೆ ಆಂದೋಲನವನ್ನು ರೂಪಿಸಿದ್ದು, ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಮಂಜುನಾಥ್, ಕಂದಾಯ ನಿರೀಕ್ಷಕ ಆನಂದ್, ಹಕ್ಕು ದಾಖಲೆ ಶಿರಸ್ತೇದಾರ್ ಹರ್ಷವರ್ಧನ್, ಪುರಸಭೆ ಸದಸ್ಯರಾದ ಕೆ.ಜಿ.ಲೋಕೇಶ್, ಬೆಣ್ಣೆಹಳ್ಳಿ ಸಿದ್ದೇಶ್, ಸಾಬೀರ್ ಅಲಿ, ಎ.ಆರೀಫ್ ಅಲಿ, ಬಸವರಾಜ್ ದೊಡ್ಮನಿ, ಪಿ.ಆರ್.ರಾಜು, ಕೆ.ಪಿ.ಗಂಗಾಧರ್, ಓ.ಜಿ.ಕುಮಾರ್, ಕೆ.ಜಿ.ಮಂಜುನಾಥ್, ಗಜೇಂದ್ರಪ್ಪ, ಕೆ.ಜಿ.ಪರಮೇಶ್ವರಪ್ಪ, ಬೆಣ್ಣೆಹಳ್ಳಿ ಬಸವರಾಜ್, ಗ್ರಾಮ ಲೆಕ್ಕಾಧಿಕಾರಿಗಳಾದ ವಿಜಯ ಮಹಾಂತೇಶ್, ಬೋರಯ್ಯ, ಶರೀಫ್, ಕೊಟ್ರೇಶ್, ಶ್ರೀಧರ್ ಮತ್ತು ನಿಟ್ಟೂರಿನ ಕೆ.ಸಂಜೀವಮೂರ್ತಿ, ಎಸ್.ಜಿ.ದೇವರಾಜ್ , ಗ್ರಾಮ ಲೆಕ್ಕಾಧಿಕಾರಿ ಸೌಮ್ಯ , ಉಪತಹಶೀಲ್ದಾರ್ ಆರ್.ರವಿ, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ ಇದ್ದರು.



