ಡಿವಿಜಿಸುದ್ದಿ.ಕಾಂ , ದಾವಣಗೆರೆ: ನಗರದಲ್ಲಿ ಪ್ರಸಿದ್ಧಿ ಪಡೆದ ವಿನೋಭನಗರ ಗಣಪತಿ ವಿಸರ್ಜನೆ ಅದ್ಧೂರಿಯಾಗಿ ನಡೆಯಿತು.
ನಗರದ ಪ್ರಮುಖ ಬೀದಿಯಲ್ಲಿ ಭರ್ಜರಿಯಾಗಿ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ಮಾಡಲಾಯಿತು. ದಾವಣಗೆರೆ ನಗರದ ವಿವಿಧ ಪ್ರದೇಶ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಭಾರೀ ಪ್ರಮಾಣ ಜನರು ಗಣೇಶ ವಿಸರ್ಜನೆ ಕಣ್ತುಂಬಿಕೊಂಡರು.

ವಿನೋಭಾ ನಗರದ ಶ್ರೀ ವೀರ ವಿನಾಯಕ ಸೇವಾ ಸಮಿತಿ 27 ನೇ ವರ್ಷದ ಗಣೇಶ ವಿಸರ್ಜನೆಗೆ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಟ್ರ್ಯಾಕ್ಚಲಾಯಿಸುವ ಮೂಲಕ ಗಣಪತಿ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಉಸ್ತುವಾರಿಯಲ್ಲಿ ದಾವಣಗೆರೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಡಿಜಿ, ಡೊಳ್ಳು , ಢಮರುಗ , ತಮಟೆ ವಾದ್ಯ , ಜಾನಪದ ಕಲಾ ಪ್ರಕಾರಗಳು ಉತ್ಸವಕ್ಕೆ ರಂಗುನೀಡಿದವು. ಈ ಬಾರಿ ವಿಸರ್ಜನಾ ಮೆರವಣಿಗೆಯಲ್ಲಿ ಹುಡುಗಿಯರು ಕೂಡ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



