ದಾವಣಗೆರೆ: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್. ಲಿಮಿಟೆಡ್ ನಲ್ಲಿ 150 ಮೆಂಟೇನರ್ ಹುದ್ದೆಗಳಿಗಾಗಿ ಐಟಿಐ ಅಥವಾ ಎನ್‍ಸಿವಿಟಿ, ಎನ್ ಸಿಟಿವಿಟಿ, ಎನ್‍ಎಸಿ ಗೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಹಾಗೂ 50 ವರ್ಷದೊಳಗಿನ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ.22 ಕೊನೆಯ ದಿನವಾಗಿರುತ್ತದೆ. ವೆಬ್ ಸೈಟ್ www.bmrc.co.in/careeres ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ helpdesk@bmrc.co.in ಸಂಪರ್ಕಿಸಬಹುದೆಂದು ಇಲಾಖೆಯ ಉಪನಿರ್ದೇಶಕರಾದ ಡಾ.ಸಿ.ಎ ಹಿರೇಮಠ ತಿಳಿಸಿದ್ದಾರೆ.



