ದಾವಣಗೆರೆ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸುಮಾರು 1,200ಕ್ಕೂ ಅಧಿಕ ಅಡಿಕೆ (arecanut) ಮರಗಳನ್ನು ದುಷ್ಕರ್ಮಿಗಳು ನಾಶ ಮಾಡಿದ ಘಟನೆ ಜಿಲ್ಲೆಯ ಅಣಬೇರು ಗ್ರಾಮದಲ್ಲಿ ನಡೆದಿದೆ.
ಪುಷ್ಪವತಿ ಎಂಬುವವರಿಗೆ ಸೇರಿದ ತೋಟಕ್ಕೆ ನುಗ್ಗಿ ದುಷ್ಕರ್ಮಿಗಳು ಅಡಿಕೆ ಮರ ನಾಶ ಮಾಡಿದ್ದಾರೆ. ಪುಷ್ಪವತಿ ಎರಡೂವರೆ ಎಕರೆ ಜಮೀನಿನಲ್ಲಿ ಅಡಕೆ ಮರಗಳನ್ನು ಬೆಳೆಸಿದ್ದರು.
ಕಳೆದ ಹಲವಾರು ವರ್ಷಗಳಿಂದ ಸಂಬಂಧಿಗಳ ನಡುವೆ ಜಮೀನಿನ ವಿಚಾರವಾಗಿ ಜಗಳ ನಡೆಯುತ್ತಿತ್ತು. ಸರ್ವೇ ಮಾಡಿಸಿದಾಗ ಪುಷ್ಪವತಿ ಹೆಚ್ಚುವರಿ ಭೂಮಿ ಇರುವುದು ಗೊತ್ತಾಗಿದೆ. ಈ ಜಮೀನು ಬಿಡುವುದಿಲ್ಲ. ಪಕ್ಕದ ಜಮೀನಿನಲ್ಲಿ ಬಿಟ್ಟುಕೊಡುವುದಾಗಿ ಪುಷ್ಪವತಿ ಹೇಳಿದ್ದರೂ, ರಾತ್ರೋರಾತ್ರಿ ಟ್ರ್ಯಾಕ್ಟರ್ ಬಳಸಿ ಸಂಬಂಧಿಕರು ಅಡಕೆ ತೋಟ ನಾಶ ಮಾಡಿದ್ದಾರೆ. ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.